ವಾಷಿಂಗ್ಟನ್: ಇರಾನ್ ಜೊತೆ ಕದನ ವಿರಾಮ್ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
NATO ಮಿತ್ರರಾಷ್ಟ್ರಗಳನ್ನು ಹೇಡಿಗಳು ಎಂದು ಕರೆದಿರುವ ಟ್ರಂಪ್, ಅಮೇರಿಕಾವಿಲ್ಲದ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಕೂಟ ಪೇಪರ್ ಹುಲಿ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಟ್ರಂಪ್, ಅಮೇರಿಕಾ ತನ್ನ ಗುರಿ ಪೂರೈಸಲು ಬಹಳ ಸನಿಹದಲ್ಲಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಪರಿಗಣಿಸುತ್ತಿದ್ದೇವೆ ಎಂದು ಹೇಳಿದರು.
ಇನ್ನು ಇರಾನ್ ತನ್ನ ಶತ್ರುಗಳಿಗೆ ತಲೆ ತಿರುಗುವಂತಹ ಹೊಡೆತ ಕೊಟ್ಟಿದೆ. ನಮ್ಮ ದೇಶದ ಮೇಲೆ ಇಸ್ರೇಲ್-ಅಮೇರಿಕಾ ದಾಳಿ ತಪ್ಪು ಲೆಕ್ಕಾಚಾರವಾಗಿ ಎಂದು ಇರಾನ್‌ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಹೇಳಿಕೆ ನೀಡಿದ್ದಾರೆ.
ಇರಾನ್ ವಿರುದ್ಧದ ಯುದ್ಧವನ್ನು ಉಲ್ಲೇಖಿಸಿ ಸ್ವಿಟ್ಜರ್ಲೆಂಡ್ ಅಮೇರಿಕಾಗೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸಿರುವುದರಿಂದ ಎರಡು ಯುದ್ಧ ವಿಮಾನಗಳನ್ನು ಇಳಿಸುವ ಅಮೇರಿಕಾದ ಮನವಿಯನ್ನು ಶ್ರೀಲಂಕಾ ನಿರಾಕರಿಸಿದೆ.





