Mysore
24
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ದೇಶದ ಪ್ರಧಾನಿಯಾಗುವುದು ನನ್ನ ಗುರಿಯಲ್ಲ: ಹಳೆಯ ಘಟನೆ ನೆನಪಿಸಿಕೊಂಡ ನಿತಿನ್‌ ಗಡ್ಕರಿ

ನವದೆಹಲಿ: 2024ರ ಲೋಕಸಭಾ ಚುನಾವಣೆ ವೇಳೆಯಲ್ಲಿ ರಾಜಕೀಯ ನಾಯಕರೊಬ್ಬರು ನನ್ನನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದರು, ಅದನ್ನು ನಾನು ತಿರಸ್ಕಾರ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಈ ಬಗ್ಗೆ ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಂದು ನಡೆದ ಘಟನೆ ನನಗೆ ಈಗಲೂ ನೆನಪಿದೆ. ಅವರ ಹೆಸರನ್ನು ನಾನು ಬಹಿರಂಗಪಡಿಸಲ್ಲ. ದೇಶದ ಪ್ರಧಾನಿಯಾಗುವುದು ನನ್ನ ಗುರಿಯಲ್ಲ. ಅಂತಹ ಮಹತ್ವಾಕಾಂಕ್ಷೆಯನ್ನು ನಾನು ಹೊಂದಿಲ್ಲ ಎಂದು ಖಡಕ್‌ ಆಗಿ ಹೇಳಿದರು.

ನಾನು ನನ್ನ ನಂಬಿಕೆಗಳಿಗೆ ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ಯಾವುದೇ ಹುದ್ದೆಗಾಗಿ ನನ್ನ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಮೂಲಕ ಮೋದಿ ನಂತರ ಪ್ರಧಾನಿಯಾಗಲು ನಿತಿನ್‌ ಗಡ್ಕರಿ 3ನೇ ಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿತ್ತು. ಇದೆಕ್ಕೆಲ್ಲಾ ನಿತಿನ್‌ ಗಡ್ಕರಿ ಅಂತ್ಯ ಹಾಡಿದ್ದಾರೆ.

 

Tags:
error: Content is protected !!