Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿ.ಎಲ್‌.ಸಂತೋಷ್‌ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ

ನವದೆಹಲಿ: ಜನತಾ ದಳದ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ ಅವರು, ಉಪಚುನಾವಣೆಯ ಬಳಿಕ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಜೀವನ ಕುರಿತಾದ ‘furrows in a field: the unexplored life of H.D.Devegowda’ ಗ್ರಂಥವನ್ನು ಬಿ.ಎಲ್.ಸಂತೋಷ್‌ ಅವರಿಗೆ ನೀಡಿದರು.

ಚನ್ನಪಟ್ಟಣದ ಸೋಲಿನ ಬಳಿಕ ರಾಜ್ಯ ರಾಜಕೀಯದ ಬೆಳವಣಿಗೆ ಕುರಿತು ನಿಖಿಲ್‌ ಕುಮಾರಸ್ವಾಮಿ ಅವರು ಕೆಲವು ಪ್ರಮುಖ ಅಂಶಗಳನ್ನು ಸಂತೋಷ್‌ ಅವರೊಂದಿಗೆ ಹಂಚಿಕೊಂಡರು. ಈ ವೇಳೆ ನಿಖಿಲ್‌ ಅವರ ಮುಂದಿನ ರಾಜಕೀಯ ಜೀವನ ನಡೆ ಕುರಿತು ಬಿ.ಎಲ್‌.ಸಂತೋಷ್ ಅವರು ಕೆಲವು ಮಹತ್ವದ‌ ಸಲಹೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿ.ಎಲ್‌. ಸಂತೋಷ್‌ ಭೇಟಿ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ದೆಹಲಿಯಲ್ಲಿ ಸಂತೋ಼ಷ್‌ ಜಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡು, ಚನ್ನಪಟ್ಟಣ ಚುನಾವಣೆ ವಿಷಯವಾಗಿ ಕೆಲ ಮಾಹಿತಿ ಕೇಳಿ ಪಡೆದರು. ಮುಂದೆ ಎನ್‌ಡಿಎ ಮೈತ್ರಿಕೂಟವನ್ನು ರಾಜ್ಯದಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ನನಗೆ ಮಾರ್ಗದರ್ಶನ ಕೊಟ್ಟರು ಎಂದು ಮಾಹಿತಿ ನೀಡಿದ್ದಾರೆ.

 

Tags: