Mysore
25
scattered clouds

Social Media

ಸೋಮವಾರ, 23 ಮಾರ್ಚ್ 2026
Light
Dark

ನ್ಯೂಯಾರ್ಕ್‌ | ಲ್ಯಾಂಡಿಂಗ್‌ ವೇಳೆ ಟ್ರಕ್‌ಗೆ ವಿಮಾನ ಡಿಕ್ಕಿ : ಇಬ್ಬರು ಸಾವು

ನ್ಯೂಯಾರ್ಕ್‌ : ಲ್ಯಾಂಡಿಂಗ್‌ ವೇಳೆ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಫೈರ್ ಟ್ರಕ್‌ಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೆನಡಾದ ಮಾಂಟ್ರಿಯಲ್‌ನಿಂದ ಬರುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ಸಿಆರ್‌ಜೆ -900 ವಿಮಾನವು ರನ್‌ವೇ 4 ರಲ್ಲಿ ಲ್ಯಾಂಡ್‌ ಆಗಿತ್ತು. ಈ ವೇಳೆ ರನ್‌ ವೇ ನಲ್ಲೇ ಫೈರ್‌ ಟ್ರಕ್‌ಗೆ ವಿಮಾನ ಡಿಕ್ಕಿಯಾಗಿದೆ. ಈ ಅವಘಡದ ಬಳಿಕ ಒಳ ಬರುವ ವಿಮಾನಗಳಿಗೆ ಏರ್‌ಪೋರ್ಟ್‌ ಮುಚ್ಚಲಾಗಿದೆ.

ವಿಮಾನ ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆಯ ವೀಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೆ, ವಿಮಾನ ಅಪಘಾತದಲ್ಲಿ ಗಾಯಗೊಂಡವರು ಹಾಗೂ ಹಾನಿಯ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

Tags:
error: Content is protected !!