Mysore
19
broken clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ರಾಷ್ಟ್ರದಲ್ಲಿ ಯುಪಿಐ ಪೇಮೆಂಟ್ಸ್‌ ನೂತನ ದಾಖಲೆ

ನವದೆಹಲಿ: ರಾಷ್ಟ್ರದಲ್ಲಿ ನೂತನ ಆರ್ಥಿಕ ಕ್ರಾಂತಿಯನ್ನು ಬರೆದಿರುವ ಯುಪಿಐ ಪಾವತಿ ಈಗ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. 2023-24ನೇ ಸಾಲಿನ ವಿತ್ತೀಯ ವರ್ಷದಲ್ಲಿ ಯುಪಿಐ ಪಾವತಿ ಪ್ರಮಾಣ ಶೇ.138ರಷ್ಟು ಏರಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವಾಲಯ, 2017-18ರ ವಿತ್ತೀಯ ವರ್ಷದಲ್ಲಿ 1 ಲಕ್ಷ ಕೋಟಿ ರೂ. ಗಳಷ್ಟು ಯುಪಿಐ ವಹಿವಾಟಿನ ಮೌಲ್ಯ ಆಗಿತ್ತು.

ಆದರೆ ಇದೀಗ ಅದರ ಮೌಲ್ಯ ಶೇ.138ರಷ್ಟು ಏರಿಕೆಯಾಗಿ ಸುಮಾರು 200 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ 2024-25ರ ಹಣಕಾಸು ವರ್ಷದ ಪ್ರಥಮ ಐದು ತಿಂಗಳುಗಳಲ್ಲಿ ಡಿಜಿಟಲ್‌ ಪಾವತಿಗಳ ಮೌಲ್ಯ 1,669 ಲಕ್ಷ ಕೋಟಿ ರೂಗೆ ಏರಿಕೆ ಕಂಡಿತ್ತು. ಆದರೆ ಈಗ ಡಿಜಿಟಲ್‌ ಪಾವತಿಗಳ ವಹಿವಾಟಿನ ಪ್ರಮಾಣ 8,659 ಕೋಟಿಯತ್ತ ಮುಖ ಮಾಡಿದೆ. ಯುಪಿಐ ವಹಿವಾಟಿನ ಮೌಲ್ಯವು 1 ಲಕ್ಷ ಕೋಟಿಯಿಂದ 200 ಲಕ್ಷ ಕೋಟಿ ಅಂದರೆ ಶೇ.138ರಷ್ಟು ಏರಿಕೆ ಕಂಡಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಡಿಜಿಟಲ್‌ ಪಾವತಿಗಳು ಈ ವರ್ಷದ ಕಳೆದ 5 ತಿಂಗಳುಗಳಲ್ಲಿ ಒಟ್ಟು ಮೌಲ್ಯದ ಪ್ರಕಾರ 101 ಲಕ್ಷ ಕೋಟಿ ರೂ. ವಹಿವಾಟಿನ ಬೆಳವಣಿಗೆಯನ್ನು ಕಂಡಿದೆ. 2017-18ರಲ್ಲಿ 2,071 ಕೋಟಿಯಷ್ಟು ಒಟ್ಟು ಡಿಜಿಟಲ್‌ ಪಾವತಿ ವಹಿವಾಟಿನ ಸಂಖ್ಯೆಯಿದ್ದರೆ, 2023-24ರಲ್ಲಿ 18,737 ಕೋಟಿ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 

Tags: