ಹೊಸದಿಲ್ಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಭೌತಿಕ ರೂಪ(ಆಫ್‌ಲೈನ್)ದಲ್ಲೇ ಇರಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಘೋಷಿಸಿದೆ.
ಎನ್‌ಟಿಎ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ಮಾಡಬೇಕೆ ಅಥವಾ ಆಫ್‌ಲೈನ್ (ಭೌತಿಕ ರೂಪ) ರೂಪದಲ್ಲೇ ಇರಬೇಕೆ ಎನ್ನುವ ವಿಸ್ತೃತ ಚರ್ಚೆಯ ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗವು ನೀಟ್ ಯುಜಿ ಪರೀಕ್ಷೆಯನ್ನು ಒಎಮ್‌ಆರ್ ಶೀಟ್ ಭರ್ತಿ ಮಾಡು ಮೂಲಕ ಆಫ್‌ಲೈನ್‌ನಲ್ಲೇ ನಡೆಸಲು ಎನ್‌ಟಿಎ ನಿರ್ಧರಿಸಿದೆ.
ಪರೀಕ್ಷೆಯು ಒಂದೇ ದಿನ ಪಾಳಿಯ ಪ್ರಾಕಾರ ನಡೆಯಲಿದೆ ಎಂದು ಅದು ಹೇಳಿದೆ.





