Mysore
20
overcast clouds
Light
Dark

ಸುಪ್ರಿಂಕೋರ್ಟ್ ಸೂಚನೆ ಮೇರೆಗೆ NEET -UG ಫಲಿತಾಂಶ ಪ್ರಕಟಿಸಿದ NTA

ನವದೆಹಲಿ : ನೀಟ್‌ –ಯುಜಿ ೨೦೨೪ ಪರೀಕ್ಷೆ ಫಲಿತಾಂಶವನ್ನು  ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಇಂದು ಪ್ರಕಟ ಮಾಡಿದೆ. ಸುಪ್ರಿಂ ಕೋರ್ಟ್‌ ಸೂಚನೆ ಮೇರೆಗೆ ನಗರ ಮತ್ತು ಕೇಂದ್ರವಾರು ಫಲಿತಾಂಶ ಪ್ರಕಟಿಸಿದೆ.

ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು NTA NEET ನ ಅಧಿಕೃತ ವೆಬ್‌ ಸೈಟ್‌ exam.nta.ac.in/NEET/ ಮತ್ತು neet.ntaonline.in ನಲ್ಲಿ ಫಲಿತಾಂಶಗಳನ್ನು ಪರಿಶೀಲಸಬಹುದು. ನೀಟ್‌ ಯುಜಿ ಫಲಿತಾಂಶವನ್ನು ಜುಲೈ ೨೦ರಂದು ಮಧ್ಯಾಹ್ನ ಒಳಗೆ ಪ್ರಕಟಿಸಬೇಕು ಎಂದು ಎನ್‌ ಟಿಎಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿತ್ತು. ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ವೆನ್‌ ಸೈಟ್‌ ನಲ್ಲಿ ಪ್ರಕಟಿಸಿ ಆದರೆ ಹೆಸರನ್ನು ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ಆದೇಶ ಮಾಡಿತ್ತು.

ಮೇ ೫ ರಂದು ೧೪ ವಿದೇಶಿ ಸೇರಿದಂತೆ ೫೭೧ ನಗರಗಳ ೪೭೫೦ ಕೇಂದ್ರಗಳಲ್ಲಿ ನೀಟ್- ಯುಜಿ ಪರೀಕ್ಷೆ ನಡೆಸಲಾಗಿತ್ತು.  ೨೩.೩೩ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸುಮಾರು ೧೫೬೩ ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂತು. ಬಳಿಕ ದೇಶದಾದ್ಯಂತ ಅಭ್ಯರ್ಥಿಗಳು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈಗಾಗಲೇ ಆರೋಪಿಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.