ಹೊಸದಿಲ್ಲಿ : ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ.
ರಾಜಸ್ಥಾನದ ಮಹೇಶ್ ಕುಮಾರ್ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದರೆ, ಮಧ್ಯಪ್ರದೇಶದ ಉತ್ಕರ್ಷ್ ಆವಾಧಿಕಾಯ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರದ ಕೃಷಾಂಗ್ ಜೋಶಿ, ದೆಹಲಿಯ ಮೃಣಾಲ್ ಕಿಶೋರ್ ಜಾ ಕ್ರಮವಾಗಿ 3 ಹಾಗೂ 4ನೇ ರ‍್ಯಾಂಕ್ ಪಡೆದಿದ್ದಾರೆ. 5 ನೇ ರ‍್ಯಾಂಕ್‌ನಲ್ಲಿ ದೆಹಲಿಯ ಅವಿಕಾ ಅಗರವಾಲ್ ಸ್ಥಾನ ಪಡೆದು, ಮಹಿಳೆಯರ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
2025ನೇ ಸಾಲಿನ ಪರೀಕ್ಷೆಯಲ್ಲಿ 22.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 12.36 ಲಕ್ಷ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ದೇಶದಲ್ಲಿ ಒಟ್ಟು 1.08 ಲಕ್ಷ ವೈದ್ಯಕೀಯ ಸೀಟುಗಳು ಲಭ್ಯವಿದೆ. ಅದರಲ್ಲಿ 56 ಸಾವಿರ ಸರ್ಕಾರಿ ಮತ್ತು 52 ಸಾವಿರ ಖಾಸಗಿ ಕಾಲೇಜುಗಳಲ್ಲಿ ಸೀಟ್ ಲಭ್ಯವಿದೆ. ರಾಷ್ಟ್ರೀಯ ಪರೀಕ್ಷೆ ಸಂಸ್ಥೆ(NTA) ಪರೀಕ್ಷೆ ನಡೆಸುತ್ತದೆ.





