ನವದೆಹಲಿ: ಲೋಕಸಭಾ ಚುಣಾವಣೆ ಫಲಿತಾಂಶ ಹೊರಬಿದ್ದಿದ್ದು, 292 ಸಂಖ್ಯಾಬಲ ಹೊಂದಿರುವ ಎನ್‌ಡಿಎ ಮಿತ್ರಪಕ್ಷವು ಮೂರನೇ ಬಾರಿಗೆ ದೆಹಲಿಯ ಗದ್ದುಗೆ ಹೇರುವ ತವಕದಲ್ಲಿದೆ.
ಸ್ವತಂತ್ರವಾಗಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಬಿಜೆಪಿ 240 ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ. ಆದರೆ ಎನ್‌ಡಿಎ ಮಿತ್ರಪಕ್ಷದ ಬಲಾಬಲಾದೊಂದಿಗೆ ತನ್ನ ಸಂಖ್ಯೆಯನ್ನು 292 ಕ್ಕೆ ಹೇರಿಸಿಕೊಂಡಿದೆ. ಈ ಬೆನ್ನಲ್ಲೇ ಮಿತ್ರ ಪಕ್ಷಗಳಿಂದ ಬಿಜೆಪಿಗೆ ಸಚಿವ ಸ್ಥಾನದ ಬೇಡಿಕೆ ಹೆಚ್ಚಿದೆ.
ಎನ್‌ಡಿಎ ಮಿತ್ರಗಳಲ್ಲಿ ಪ್ರಮುಖವಾಗಿರುವ ಟಿಡಿಪಿ ಹಾಗೂ ಜೆಡಿಯು ಪಕ್ಷಗಳಿಂದ ಬಿಜೆಪಿ ಒತ್ತಡ ಹೆಚ್ಚಿದೆ. ಈ ಎರಡು ಪಕ್ಷಗಳು ಕೂಡ 4 ಸಚಿವ ಸಂಪುಟ ಹಾಗೂ ರಾಜ್ಯ ಖಾತೆ ಜೊತೆಗೆ ಸ್ವೀಕರ್ ಸ್ಥಾನಕ್ಕೂ ಕೂಡ ಡಿಮ್ಯಾಂಡ್ ಇಟ್ಟಿವೆ.





