Mysore
28
scattered clouds

Social Media

ಬುಧವಾರ, 16 ಏಪ್ರಿಲ 2025
Light
Dark

ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ ಬಿಗ್‌ ಶಾಕ್: ಯುಪಿಯಲ್ಲಿ ಮತ್ತೆ ಸದ್ದು ಮಾಡಲಿದೆ ಬುಲ್ಡೋಜರ್‌

ಉತ್ತರ ಪ್ರದೇಶ: ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುವ ಕಳ್ಳರ ಮೇಲೆ ಉತ್ತರ ಪ್ರದೇಶ ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್‌ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಮತ್ತೆ ಬುಲ್ಡೋಜರ್‌ ಬಾಬಾ ಸದ್ದು ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ನೀಟ್‌ ಮತ್ತು ಯುಜಿಸಿ ನೆಟ್‌ನಲ್ಲಿ ನಡೆದ ಅಕ್ರಮದ ನಂತರ ಈ ಪರೀಕ್ಷಾ ಪ್ರಶ್ನೆ ಪತ್ರಿಕೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡಿದೆ.

ಈ ಹೊಸ ಕಾನೂನಿನ ಪ್ರಕಾರ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪತ್ರಿಕೆಗಳನ್ನು ಹಂಚುವ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಂತಹ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಭಾರೀ ದಂಡ, ಬುಲ್ಡೋಜರ್‌ ಕ್ರಮ ಹಾಗೂ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಖಡಕ್‌ ಸೂಚನೆ ನೀಡಿದೆ.

ಈ ಎಲ್ಲಾ ಖಡಕ್‌ ಸೂಚನೆಗಳ ಜೊತೆಗೆ ಪ್ರಶ್ನೆ ಪತ್ರಿಕೆ ಎಣಿಕೆಯನ್ನು ನಿಲ್ಲಿಸಲು ಸರ್ಕಾರ ಹೊಸ ನೀತಿಯನ್ನು ಜಾರಿಗೆ ತಂದಿದೆ. ಪ್ರತಿ ಪರೀಕ್ಷೆಯ ಶಿಫ್ಟ್‌ ಕನಿಷ್ಠ ಎರಡು ಸೆಟ್‌ ಪೇಪರ್‌ಗಳನ್ನು ಹೊಂದಿರುತ್ತದೆ. ಪ್ರತ್ಯೇಕ ಏಜೆನ್ಸಿಗಳಿಂದ ಇವುಗಳನ್ನು ಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ.

ಇನ್ನೂ ಪರೀಕ್ಷೆ ಬರೆಯಲು 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದರೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಮುದ್ರಣಾಲಯಗಳ ಆಯ್ಕೆಯನ್ನು ಕೂಡ ಅತ್ಯಂತ ಗೌಪ್ಯವಾಗಿ ನಡೆಸಲಾಗುವುದು. ಮುದ್ರಣಾಲಯಕ್ಕೆ ಭೇಟಿ ನೀಡುವವರನ್ನು ಕೂಡ ಪರೀಕ್ಷಿಸಲಾಗುವುದು. ಜೊತೆಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ ಎಂದು ಮಾಹಿತಿ ನೀಡಿದೆ.

Tags: