Mysore
20
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

22 ನಿಮಿಷದಲ್ಲಿ ಪಾಕ್‌ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ: ಪ್ರಧಾನಿ ನರೇಂದ್ರ ಮೋದಿ

narrendra modi

ಬಿಕನೇರ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಕೇವಲ 22 ನಿಮಿಷದಲ್ಲಿ ಸೇಡು ತೀರಿಸಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

ಪಾಕಿಸ್ತಾನ ಹಾಗೂ ಪಿಒಕೆ ಮೇಲೆ ನಡೆದ ಆಪರೇಷನ್ ಸಿಂಧೂರ್ ನಂತರ ರಾಜಸ್ಥಾನದ ಬಿಕನೇರ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಏಪ್ರಿಲ್.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದೆ. ಇದು ನಮ್ಮ ಸೇನಾ ಪಡೆಯ ತಾಕತ್ತು ಎಂದು ಬಣ್ಣಿಸಿದ್ದಾರೆ.

ಏ.22ರ ದಾಳಿಗೆ ಪ್ರತಿಯಾಗಿ ನಾವು ಭಯೋತ್ಪಾದಕರ 9 ಅಡಗುತಾಣಗಳನ್ನು 22 ನಿಮಿಷದಲ್ಲಿ ನಾಶಪಡಿಸಿದೆವು. ಸಿಂಧೂರವು ಪುಡಿಯಾಗಿ ಬದಲಾದರೆ ಏನಾಗುತ್ತದೆ ಎಂಬುದಕ್ಕೆ ವಿಶ್ವಕ್ಕೆ ಮತ್ತು ನಮ್ಮ ಶತ್ರುಗಳಿಗೆ ತೋರಿಸಿದ್ದೇವೆ ಎಂದು ಸೇನಾಪಡೆಯ ಕಾರ್ಯಾಚರಣೆ ಬಗ್ಗೆ ಕೊಂಡಾಡಿದರು.

ನನ್ನ ರಕ್ತನಾಳಗಳಲ್ಲಿ ಕುದಿಯುತ್ತಿರುವುದು ರಕ್ತವಲ್ಲ. ಅದು ಸಿಂಧೂರ ಎಂದು ಮೋದಿ ಹೇಳುತ್ತಿದ್ದಂತೆ ಜನಸ್ತೋಮದಿಂದ ಮೋದಿ.. ಮೋದಿ.. ಎಂಬ ಜೈಕಾರದ ಘೋಷಣೆಗಳು ಮೊಳಗಿದವು.

ಭಾರತದ ತಂಟೆಗೆ ಬರುವ ಮುನ್ನ ನೂರು ಬಾರಿ ಯೋಚಿಸಿ ಎಂದು ಪಾಕ್‍ಗೆ ಎಚ್ಚರಿಕೆ ಕೊಟ್ಟರು. ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಗಳಿಗೆ ನಾವು ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಸಿಂಧೂರವನ್ನು ಅಳಿಸಿ ಹಾಕಿದ ಪಾತಕಿಗಳನ್ನು ನೆಲದಲ್ಲೇ ಹೂತು ಹಾಕಿ ಎಂದು ಹೇಳಿದ್ದೆವು. ಅದರಂತೆ ಸಶಸ್ತ್ರ ಪಡೆಗಳು ಅದೇ ಕೆಲಸವನ್ನು ಮಾಡಿವೆ ಎಂದು ಪ್ರಸಂಶಿಸಿದರು.

ನಾವು ಯಾವುದೇ ರಾಷ್ಟ್ರದ ಪರಮಾಣುಗಳಿಗೆ ಹೆದರುವುದಿಲ್ಲ. ಹಾಗಂತ ಪರಿಸ್ಥಿತಿ ಕೈ ಮೀರಿದರೆ ಸುಮ್ಮನೆ ಕೂರುವುದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಪರೋಕ್ಷವಾಗಿ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಕೊಟ್ಟರು.

Tags:
error: Content is protected !!