Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಕೇಂದ್ರ ಬಿಜೆಪಿಯಿಂದ ಎದುರಿಸುತ್ತಿರುವ ಸವಾಲುಗಳು ಭೂಕುಸಿತದಂತಿವೆ: ಪ್ರಿಯಾಂಕಾ ಗಾಂಧಿ

ಕೋಯಿಕ್ಕೋಡ್‌: ಸಾರ್ವಜನಿಕರು ಕೇಂದ್ರ ಬಿಜೆಪಿಯಿಂದ ಎದುರಿಸುತ್ತಿರುವ ಸವಾಲುಗಳು ಭೂಕುಸಿತದಂತಿವೆ. ಅವುಗಳಿಗೆ ಯಾವುದೇ ನಿಯಮ ಅಥವಾ ವಿವರಣೆಗಳಿಲ್ಲ ಎಂದು ವಯನಾಡು ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ದಾಖಲೆಮಟ್ಟ ಅಂತರದಿಂದ ಗೆಲುವು ಸಾಧಿಸಿದ್ದ ಪ್ರಿಯಾಂಕಾ ಗಾಂಧಿ ಇಂದು(ನ.30) ಆಯೋಜಿಸಲಾಗಿದ್ದ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ವಾದ್ರಾ ಮತ್ತು ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರಜಾಸತ್ತಾತ್ಮಕ ನಡವಳಿಕೆಯಾಗಲಿ ಅಥವಾ ಅಭಿವೃದ್ಧಿ ಕಾರ್ಯಗಳಾಗಲಿ ಪಾಲನೆಯಾಗುತ್ತಿಲ್ಲ. ಅಲ್ಲದೇ ಅವುಗಳನ್ನು ರಾಜಕೀಯ ಹೋರಾಟದಲ್ಲೂ ಅದನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇನ್ನು ನಾನು ಈ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವುದರಿಂದ ನಿಮ್ಮ ಧ್ವನಿಯಾಗಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಹೀಗಾಗಿ ನಿಮ್ಮ ನಂಬಿಕೆ, ಮೌಲ್ಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

Tags:
error: Content is protected !!