Mysore
24
scattered clouds

Social Media

ಬುಧವಾರ, 16 ಏಪ್ರಿಲ 2025
Light
Dark

 ತೆರಿಗೆ ಹಣವನ್ನು ‘ಶ್ರೀಮಂತ ಸ್ನೇಹಿತರ’ ಸಾಲವನ್ನು ಮನ್ನಾ ಮಾಡಲು ಬಳಸುತ್ತಿದೆ ಮೋದಿ ಸರ್ಕಾರ : ಕೇಜ್ರೀವಾಲ್‌

ನವದೆಹಲಿ: ತೆರಿಗೆ ಹಣವನ್ನು ‘ಶ್ರೀಮಂತ ಸ್ನೇಹಿತರ’ ಸಾಲವನ್ನು ಮನ್ನಾ ಮಾಡಲು ಬಳಸುವ ಮೂಲಕ ಮೋದಿ ತೆರಿಗೆದಾರರಿಗೆ ದ್ರೋಹವೆಸಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಜ್ರಿವಾಲ್, ಅಗತ್ಯ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರಿಕೆ ಖಂಡಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಸೌಲಭ್ಯಗಳನ್ನು ನೀಡುವ ಭರವಸೆಯ ಮೇಲೆ ಸರ್ಕಾರ ನನ್ನಿಂದ ತೆರಿಗೆಯನ್ನು ತೆಗೆದುಕೊಂಡಿದೆ ಎಂದು ತೆರಿಗೆದಾರರು ಭಾವಿಸುತ್ತಾರೆ. ಆದರೆ ಸರ್ಕಾರ ನಮ್ಮ ಶ್ರೀಮಂತ ಸ್ನೇಹಿತರ ಸಾಲವನ್ನು ಮನ್ನಾ ಮಾಡಲು ನನ್ನ ತೆರಿಗೆ ಹಣವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.

ಕಳೆದ 75 ವರ್ಷಗಳಲ್ಲಿ ಸರ್ಕಾರವು ಮೂಲ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ₹1000 ಕೋಟಿ ಮೀರಿದೆ. ಅವರು ಈಗ ಸರ್ಕಾರದ ಎಲ್ಲಾ ಉಚಿತ ಕೊಡುಗೆಗಳನ್ನು ಕೊನೆಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸಬೇಕು. ಉಚಿತ ಪಡಿತರ ನಿಲ್ಲಿಸಬೇಕು ಎಂದು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಎಲ್ಲ ಹಣ ಎಲ್ಲಿ ಹೋಯಿತು? ಈ ಸರ್ಕಾರದ ಹಣದಿಂದ ಅವರು ತಮ್ಮ ಸ್ನೇಹಿತರ ಸಾಲವನ್ನು ಮನ್ನಾ ಮಾಡುತ್ತಿದ್ದಾರೆ. ಅವರು ಸೂಪರ್ ಶ್ರೀಮಂತರ ₹ 5 ಲಕ್ಷ ಕೋಟಿ ಮೌಲ್ಯದ ತೆರಿಗೆಯನ್ನು ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರದ ಅಗ್ನಿಪಥ ಯೋಜನೆಯ ಬಗ್ಗೆ ಮಾತನಾಡಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರವು ತಮ್ಮ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸುತ್ತಿದೆ. ಇನ್ನು ಮುಂದೆ ರಕ್ಷಣಾ ಸಿಬ್ಬಂದಿಗೆ ಸರ್ಕಾರವು ಪಿಂಚಣಿಗಳನ್ನು ಪಾವತಿಸಬೇಕಾಗಿಲ್ಲ ಎಂದು ಇದನ್ನು ಮಾಡಲಾಗುತ್ತಿದೆ ಎಂದು ಅದು ಹೇಳಿದೆ ಎಂದರು.

ಉಚಿತ ಕೊಡುಗೆಗಳ ಕುರಿತು ಮೋದಿ ಹೇಳಿಕೆಯ ನಂತರ ಪ್ರತಿಕ್ರಿಯೆ ನೀಡಿದ ಅವರು ಉಚಿತ ಕೊಡುಗೆಗಳು ಭಾರತವನ್ನು ಸ್ವಾವಲಂಬಿಯಾಗದಂತೆ ನಿರ್ಬಂಧಿಸುತ್ತದೆ ಮತ್ತು ತೆರಿಗೆದಾರರ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ