Mysore
16
scattered clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

2024-25ನೇ ಸಾಲಿನ ಕೇಂದ್ರ ಬಜೆಟ್ ಮುಖ್ಯಾಂಶಗಳು

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ೨೦೨೪ ಮತ್ತು ೨೫ ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ೩ನೇ ಅವಧಿಯ ಮೊದಲ ಬಜೆಟ್‌ ಇದಾಗಿದ್ದು, ಇದೇ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್‌ ೭ ಬಾರಿ ಬಜೆಟ್‌ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಇಂದಿನ ಬಜೆಟ್‌ ಮುಖ್ಯಾಂಶಗಳು

  • ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ ೧.೫೨ ಲಕ್ಷ ಕೋಟಿ
  • ಉದ್ಯೋಗ ಕೌಶಲ್ಯ ಅಭಿವೃದ್ಧಿಗೆ ೧.೪೮ ಲಕ್ಷ ಕೋಟಿ
  • ಗ್ರಾಮೀಣಾಭಿವೃದ್ಧಿಗೆ ೨.೬೬ ಲಕ್ಷ ಕೋಟಿ
  • ಶಿಕ್ಷಣ, ಉದ್ಯೋಗ ಕೌಶಲ್ಯಾಭಿವೃದ್ಧಿಗಾಗಿ ೧.೪೮ ಕೋಟಿ
  • ೩ ಲಕ್ಷದ ವರೆಗೆ ಯಾವುದೇ ರೀತಿಯ ತೆರಿಗೆ ಇಲ್ಲ
  • ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ೫ ವರ್ಷ ವಿಸ್ತರಣೆ
  • ವರ್ಷದಲ್ಲಿ ೧ ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ
  • ಉನ್ನತ್ತ ಶಿಕ್ಷಣಕ್ಕೆ ಸರ್ಕಾರದಿಂದ ೧೦ ಲಕ್ಷ ರೂ ವರೆಗೆ ಸಾಲ ಸೌಲಭ್ಯ
  • ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ ೧೫ ಸಾವಿರ ವೇತನ
  • ೫ ವರ್ಷದಲ್ಲಿ ೪.೧ ಕೋಟಿ ಯುವಕರಿಗೆ ಉದ್ಯೋಗಕ್ಕೆ ಯೋಜನೆ
  • ಹೈದರಾಬಾದ್‌ ಬೆಂಗಳೂರು ಕೈಗಾರಿಕಾ ಕಾರಿಡಾರ್‌
  • ಎನ್‌ ಡಿಎ ಮಿತ್ರಪಕ್ಷಗಳ ರಾಜ್ಯಗಳಿಗೆ ವಿಶೇಷವಾದ ಅನುದಾನ
  • ೫ ವರ್ಷಗಳಲ್ಲಿ ಟಾಪ್‌ ೫೦೦ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ ಶಿಪ್‌ ಅವಕಾಶ
  • ಪಿಎಂ ಆವಾಸ್‌ ಯೋಜನೆಯಡಿ ೩ ಕೋಟಿ ಮನೆಗಳ ನಿರ್ಮಾಣ ಗುರಿ
  • ಮಹಿಳೆಯರಿಗೆ ೩ ಸಾವಿರ ಕೋಟಿಗೂ ಹೆಚ್ಚು ಅನುದಾನ
  • ದೇಶದಲ್ಲಿ ೧೨ ಹೊಸ ಇಂಡಸ್ಟ್ರೀಯಲ್‌ ಪಾರ್ಕ್‌ ಗಳ ನಿರ್ಮಾಣ
  • ಪ್ರಧಾನ ಮಂತ್ರಿ ಸೂರ್ಯೋಘರ್‌ ಉಚಿತ ವಿದ್ಯುತ್‌ ಯೋಜನೆ
  • ಧಾರ್ಮಿಕ ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಒತ್ತು
  • ೧೦೦ MW ವಾಣಿಜ್ಯ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪನೆ
  • ಮೊಬೈಲ್‌ ಹಾಗೂ ಚಾರ್ಜರ್ಗಳ ಮೇಲಿನೆ ತೆರಿಗೆ ಇಳಿಕೆ
  • ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್‌ ತೆರಿಗೆ ಶೇ.೬ ರಷ್ಟು ಇಳಿಕೆ
  • ಮೂರು ಕ್ಯಾನ್ಸರ್‌ ಔಷಧಿಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿ ತೆರವು
  • ಸ್ಟ್ರೀಟ್‌ ಫುಡ್‌ ಹಬ್‌ ಸ್ಥಾಪನೆ
  • ತೆರಿಗೆ ಪದ್ದತಿ ಮತ್ತಷ್ಟು ಸರಳೀಕರಣ
  • ಇ ಕಾಮರ್ಸ್‌ ಮೇಲಿನ TDS ಇಳಿಕೆ
  • ಡಿಜಿಟಲ್‌ ಭೂ ಆಧಾರ್‌ ಯೋಜನೆ ಘೋಷಣೆ
  • ನೂರು ದೊಡ್ಡ ನಗರದಲ್ಲಿ ಸಂಸ್ಕರಿಸಿದ ನೀರಿನ ಘಟಕ
  • ಪ್ರವಾಹ ನಿಯಂತ್ರಣಕ್ಕೆ ೧೧೫೦೦ ಕೋಟಿ ಪ್ಯಾಕೇಜ್‌
  • ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ
  • ನಗರ ಪ್ರದೇಶದ ಬಡವರ ವಸತಿಗಾಗಿ ೧೦ ಲಕ್ಷ ಕೋಟಿ
  • ೪೦೦ ಜಿಲ್ಲೆಗಳಲ್ಲಿ ಡಿಜಿಟಲ್‌ ಬೆಳೆ ಸಮೀಕ್ಷೆ
  • ೨೬ ಸಾವಿರ ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ
  • ಆಂಧ್ರಪ್ರದೇಶದ ಹೊಸ ರಾಜಧಾನಿಗೆ ೧೫೦೦೦ ಕೋಟಿ
  • ಮುದ್ರಾ ಸಾಲದ ಮಿತಿ ೨೦ ಲಕ್ಷಕ್ಕೆ ಹೆಚ್ಚಳ

 

Tags:
error: Content is protected !!