Mysore
31
scattered clouds
Light
Dark

ಚಿನ್ನ ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.೬ರಷ್ಟು ಕಡಿತ

ನವದೆಹಲಿ : ಚಿನ್ನ ಬೆಳ್ಳಿ ಮೇಲಿನ ಕಸ್ಟಮ್ಸ್‌ ತೆರಿಗೆ ಶೇ.೬ರಷ್ಟು ಕಡಿತ ಮಾಡುವುದಾಗಿ ಸಚಿವೆ  ನಿರ್ಮಾಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಲೋಕಸಭೆಯಲ್ಲಿ ತಮ್ಮ ೭ನೇ ಬಜೆಟ್‌ ಮಂಡಿಸಿದ ನಿರ್ಮಾಲಾ ಸೀತಾರಾಮನ್‌ , ಚಿನ್ನ ಬೆಳ್ಳಿ ಮೇಲಿನ ಕಸ್ಟಮ್ಸ್‌ ತೆರಿಗೆ ಶೇ.೬ರಷ್ಟು ಕಡಿತ ಮಾಡಲಾಗುವುದು. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.೬ ಮತ್ತು ಪ್ಲಾಟಿನಂ ಮೇಲೆ ೬.೫ ಗೆ ಇಳಿಕೆ ಮಾಡಲಾಗಿದೆ. ಮೊಬೈಲ್‌ ಹಾಗೂ ಚಾರ್ಜರ್‌ ಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. ಜೊತೆಗೆ ಇ ಕಾಮರ್ಸ್‌ ಮೇಲಿನ TDS ಇಳಿಸಲಾಗಿದೆ. ಟಿಡಿಎಸ್‌ ಐಟಿ ಸಲ್ಲಿಕೆ ತಡವಾದರೆ ದಂಡ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಮೂರು ಕ್ಯಾನ್ಸರ್‌ ಔಷಧಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿ ತೆರವುಗೊಳಿಸಲಾಗುವುದು. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿದೆ. ಎಕ್ಸ್‌ ರೇ ಟ್ಯೂಬ್‌ ಗಳು ಮತ್ತು ಫ್ಲಾಟ್‌ ಪ್ಯಾನಲ್‌ ಡಿಟೆಕ್ಟರ್‌ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ ೬ ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ ೬.೪ ರಷ್ಟು ಕಡಿಮೆ ಮಾಡಲಾಗುವುದು ಎಂದು ಬಜೆಟ್‌ ನಲ್ಲಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.