Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಗಾಜಾ ಪಟ್ಟಿಯಲ್ಲಿ ಮುಂದುವರಿದ ಕದನ: ವಾಯುದಾಳಿಯಲ್ಲಿ 30 ಮಂದಿ ಸಾವು

ಜೆರುಸೇಲಂ: ಗಾಜಾ ಪಟ್ಟಿಯಲ್ಲಿ ಕದನ ಮುಂದುವರಿದಿದ್ದು, ಮಂಗಳವಾರ ಇಸ್ರೆಲ್‌ ಸೇನೆ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಮಂದಿ ಬಲಿಯಾಗಿದ್ದಾರೆ.

ಗಾಜಾದ ಡೇರ್‌ ಅಲ್‌ ಬಲಾಹ್‌ ನಗರದ ಕೇಂದ್ರ ಭಾಗವನ್ನು ಗುರಿಯಾಗಿಸಿ ಎರಡು ದಾಳಿ ನಡೆಯಿತು. ಕಳೆದ ಒಂದು ತಿಂಗಳಿನಿಂದ ಈ ದಾಳಿ ಮುಂದುವರಿದಿದ್ದು, ನೂರಾರು ಜನರ ಸ್ಥಿತಿ ಗಂಭೀರವಾಗಿದೆ.

ದಾಳಿ ಕುರಿತು ಇಸ್ರೇಲ್‌ ಸೇನೆ ಅಧಿಕೃತವಾಗಿ ಏನೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಬಂಡುಕೋರರ ಅಡಗುತಾಣ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್‌ ಈ ಹಿಂದೆ ಪ್ರತಿಪಾದಿಸಿತ್ತು.

ಇನ್ನು ದಕ್ಷಿಣ ಭಾಗದ ಖಾನ್‌ ಯೂನಿಸ್‌ ನಗರದಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

 

Tags:
error: Content is protected !!