ಮೆಲ್ಬರ್ನ್: ಉತ್ತರ ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ(ಮೇ.24) ಭಾರಿ ಕುಸಿತ ಉಂಟಾಗಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವುದಾಗಿ ಆಸ್ಟ್ರೇಲಿಯಾ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ ವರದಿ ಮಾಡಿದೆ.
ಎಂಗಾ ಪ್ರಾಂತ್ಯದ ಕಾವೊಕಲಮ್ ಗ್ರಾಮದಲ್ಲಿ ಬೆಳಿಗ್ಗಿನ ಜಾವ 3ಕ್ಕೆ ಭೂ ಕುಸಿತ ಉಂಟಾಗಿದೆ. ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ಅದನ್ನು ಖಚಿತಪಡಿಸಿಲ್ಲ ಎಂದು ಅಲ್ಲಿನ ಮಾಧ್ಯಗಳು ವರದಿ ಮಾಡಿವೆ.
ಭೂಮಿಯಲ್ಲಿ ಹೂತುಹೋಗಿರುವ ಶವಗಳನ್ನು ಸ್ಥಳೀಯರು ಹೊರತೆಗೆಯುತ್ತಿರುವ ವಿಡಿಯೊಗಳು ಸೋಶೀಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.
ಆಸ್ಟ್ರೇಲಿಯಾ ಖಂಡದಲ್ಲಿರುವ ಈ ಪ್ರದೇಶದಲ್ಲಿ ೧ ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕೃಷಿ ಪ್ರಧಾನವಾಗಿರುವ ಪಪುವಾ ನ್ಯೂಗಿನಿಯಲ್ಲಿ ೮೦೦ ಕ್ಕೂ ಹೆಚ್ಚು ಭಾಷೆ ಮಾತನಾಡುವ ಜನರಿದ್ದಾರೆ.





