ಬೀಜಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತ-ಚೀನಾ ಅಭಿವೃದ್ಧಿಗೆ ಸಿಂಗ್ ಅವರ ಕಾರ್ಯ ವೈಖರಿಯನ್ನು ನೆನೆದುಕೊಂಡು ಶ್ಲಾಘಿಸುವ ಮೂಲಕ ಚೀನಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, 10 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ವೇಳೆ ಭಾರತ ಮತ್ತು ಚೀನಾ ದೇಶಗಳ ಗೊಂದಲಗಳನ್ನು ನಿವಾರಿಸಿ, ಈ ದೇಶಗಳ ಅಭಿವೃದ್ಧಿಗಾಗಿ ಒಪ್ಪಂದಗಳನ್ನು ಮಾಡಿಕೊಂಡಿದ್ದನ್ನು ನೆನೆದು ಅಭಿನಂದಿಸಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋನಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಭಾರತ ಹಾಗು ಇಡೀ ಪ್ರಪಂಚ ಕಂಡ ಹೆಸರಾಂತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಅಂದಿನ ಕಾಲದಲ್ಲಿ ಪ್ರಧಾನಿಯಾಗಿದ್ದಾಗ ಚೀನಾ ಮತ್ತು ಭಾರತದ ಸಂಬಂಧದ ವೃದ್ಧಿಗಾಗಿ ಶಾಂತಿ ಹಾಗೂ ಸಮೃದ್ಧಿಗಾಗಿ ಆರ್ಥಿಕವಾಗಿ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಿಂಗ್ ಅವರ ನಿಧನದಿಂದ ಚೀನಾ ದೇಶ ತೀವ್ರ ಸಂತಾಪ ಸೂಚಿಸುತ್ತಿದ್ದು, ಭಾರತ ಸರ್ಕಾರ, ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ತನ್ನ ಸಂತಾಪಗಳನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.




