ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವದ ಮೂಲ ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧತೆಯನ್ನು ಪುನರುಚ್ಚರಿಸೋಣ ಎಂದಿದ್ದಾರೆ. ಹಾಗೆಯೇ ಗಣರಾಜ್ಯವನ್ನು ರಕ್ಷಿಸಿಕೊಳ್ಳಲು ಸಾಮೂಹಿಕ ಜಾಗೃತಿ ಅಗತ್ಯ ಎಂದು ಒತ್ತಿ ಹೇಳಿದ್ದಾರೆ.
ಕಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶವಾಸಿಗಳಿಗೆ ಶುಭಾಶಯಗಳನ್ನು ಕೋರಿದರು. ನಮ್ಮ ಗಣರಾಜ್ಯದ ರಕ್ಷಣೆಗೆ ಚಿರಸ್ಥಾಯಿ ಸತರ್ಕತೆ ಅಗತ್ಯ. ನಾವೆಲ್ಲರೂ ಈ ಸತರ್ಕತೆಯನ್ನು ಪಾಲಿಸಬೇಕು. ಸಂವಿಧಾನದ ಮೌಲ್ಯಗಳಿಗೆ ನವೀಕರಿಸಿದ ಅಂಗೀಕಾರ ಮಾಡುವ ಸಮಯ ಇದು ಎಂದು ಹೇಳಿದರು.
ಬಹುತ್ವವಾದ, ವೈವಿಧ್ಯತೆ, ಸಾಮಾಜಿಕ ಸಾಮರಸ್ಯ, ಸಮಾವೇಶ ಮತ್ತು ಏಕತೆಯನ್ನು ಒತ್ತಿ ಹೇಳಿ, ಎಲ್ಲರೂ ಒಗ್ಗೂಡಿ ದೇಶದ ಏಳಿಗೆಗೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.





