Mysore
26
scattered clouds

Social Media

ಶನಿವಾರ, 28 ಡಿಸೆಂಬರ್ 2024
Light
Dark

ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ ಸ್ಥಳದಲ್ಲಿ ಸ್ಮಾರಕಕ್ಕೆ ಮನವಿ; ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ನವದೆಹಲಿ: ಡಾ. ಮನಮೋಹನ್‌ ಸಿಂಗ್‌ ನಿಧನದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದು ಸ್ಮಾರಕ ನಿರ್ಮಾಣಕ್ಕಾಗಿ ಮನವಿ ಮಾಡಿದ್ದಾರೆ.

ದೇಶದ ಅಭಿವೃದ್ದಿಯ ಹರಿಕಾರ, ದೇಶದ ಆರ್ಥಿಕತೆಗೆ ಡಾ. ಮನಮೋಹನ್‌ ಸಿಂಗ್‌ ಅವರ ಕೊಡುಗೆ ಗಣನೀಯವಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಆಗಿ ಆರ್ಥಿಕ ಹಾಗೂ ಹಣಕಾಸಿನ ವಿಷಯಗಳ ಕುರಿತಾಗಿ ಅವರು ತೆಗೆದುಕೊಂಡಿರುವ ನಿರ್ಣಯಗಳು ದೇಶ ಆರ್ಥಿಕತೆಯಲ್ಲಿ ಸಧೃಡವಾಗಿ ನಿಲ್ಲಲು ಕಾರಣವಾಗಿದೆ.

ಅಮೇರಿಕಾದ ಮಾಜಿ ಪ್ರಧಾನಿ ಬರಾಕ್‌ ಒಬಾಮಾ ಅವರು ಮನಮೋಹನ್‌ ಸಿಂಗ್‌ ಕುರಿತು, ಭಾರತದ ಪ್ರಧಾನಿ ಮಾತನಾಡಿದಾಗಲೆಲ್ಲಾ ಇಡೀ ಜಗತ್ತು ಅವರ ಮಾತನ್ನು ಕೇಳುತ್ತದೆ ಎಂದು ಮೆಚ್ಚುಗೆಯ ಮಾತಗಳನ್ನು ಆಡಿದ್ದಾರೆ.

ನಾಳೆ (ಡಿ.28) ನಿಗಮ್‌ಬೋಧ್‌ ಘಾಟ್‌ನಲ್ಲಿ ಮನಮೋಹನ್‌ ಸಿಂಗ್‌ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆ ಸ್ಥಳದಲ್ಲಿ ಅವರ ಸ್ಮಾರಕ ನಿರ್ಮಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

Tags: