Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪಹಲ್ಗಾಮ್‌ ಉಗ್ರರ ದಾಳಿ ಬಗ್ಗೆ ಚರ್ಚಿಸಲು ವಿಶೇಷ ಸಂಸತ್‌ ಅಧಿವೇಶನ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

mallikarjun kharge pahalgam attack

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರ ಗುಂಡಿನ ದಾಳಿ ಕುರಿತು ಸುದೀರ್ಘವಾಗಿ ಚರ್ಚಿಸಲು ವಿಶೇಷ ಸಂಸತ್‌ ಅಧಿವೇಶನ ನಡೆಸುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನ ನಡೆಸಬೇಕು. ಈ ಅಧಿವೇಶನವು ದಾಳಿಯ ಬಗ್ಗೆ ಜಂಟಿ ನಿಲುವನ್ನು ವ್ಯಕ್ತಪಡಿಸಲು ಮತ್ತು ಪರಿಸ್ಥಿತಿ ನಿಭಾಯಿಸಲು ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಲಿದೆ.

ಹೆಚ್ಚಿನ ಸುದ್ದಿ:- ಪಾಕ್‌ನಿಂದ ಸತತ 5ನೇ ದಿನವೂ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆ ದಿಟ್ಟ ಉತ್ತರ 

ಈ ಸಮಯದಲ್ಲಿ ಒಗ್ಗಟ್ಟು ಮತ್ತು ಏಕತೆಯ ಅಗತ್ಯವಿದೆ. ಹೀಗಾಗಿ ಸರ್ಕಾರ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗನೇ ಕರೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:- ನಾವು ಬದುಕಬೇಕೆಂದರೆ ಯುದ್ಧ ಮಾಡಲೇಬೇಕು ಎಂದ ‘ಜೋಗಿ’ ಪ್ರೇಮ್‍

Tags:
error: Content is protected !!