Mysore
13
clear sky

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಹೋಟೆಲ್‌ನ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾದ ಮಳಯಾಳಂ ನಟ ದಿಲೀಪ್‌ ಶಂಕರ್‌

ತಿರುವಂತನಪುರ: ಮಳಯಾಳಂನ ಕಿರುತೆರೆ ನಟ ದಿಲೀಪ್‌ ಶಂಕರ್‌ ತಿರುವಂತನಪುರದ ಹೋಟೆಲ್‌ ಕೋಣೆಯೊಂದರಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.

ದಿಲೀಪ್‌  ನಾಲ್ಕು ದಿನಗಳ ಹಿಂದೆ ಹೋಟೆಲ್‌ಗೆ ಬಂದು ತಂಗಿದ್ದರು. ಕಳೆದ ಎರಡು ದಿನಗಳಿಂದ ಅವರು ಹೊರಗಡೆ ಎಲ್ಲೂ ಕಾಣಿಸಿರಲಿಲ್ಲ. ಭಾನುವಾರ ಬೆಳಿಗ್ಗೆ ಅವರ ಕೊಠಡಿಯಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿ  ರೂಮ್‌ ಬಾಗಿಲು ತೆರೆದು ನೋಡಿದಾಗ ನಟ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ.

ಬಳಿಕ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕಂಟೋನ್ಮೆಂಟ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಠಡಿ ಪರೀಕ್ಷಿಸಲು ವಿಧಿವಜ್ಞಾನ ತಂಡ ನೀಯೋಜಿಸಲಾಗಿದೆ.

ಸದ್ಯ ಯಾವುದೇ ಅನುಮಾನಗಳು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರವಾದ ಮಾಹಿತಿ ತಿಳಿಯುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Tags:
error: Content is protected !!