Mysore
18
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮಾಘ ಹುಣ್ಣಿಮೆ ಹಿನ್ನೆಲೆ ಮಹಾಕುಂಭಮೇಳದಲ್ಲಿ 5ನೇ ಪುಣ್ಯಸ್ನಾನ

ಪ್ರಯಾಗ್‌ರಾಜ್:‌ ಮಾಘ ಪೂರ್ಣಿಮೆ ನಿಮಿತ್ತ ಇಂದು ಮಹಾಕುಂಭಮೇಳದಲ್ಲಿ ವಿಶೇಷ ಪುಣ್ಯಸ್ನಾನ ನಡೆಯುತ್ತಿದ್ದು, ಬೆಳಿಗ್ಗೆ 6 ಗಂಟೆಯವರೆಗೆ 73 ಲಕ್ಷಕ್ಕೂ ಅಧಿಕ ಜನರು ಪುಣ್ಯ ಸ್ನಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗಿನ ಜಾವದಿಂದಲೇ ಪುಣ್ಯಸ್ನಾನ ಆರಂಭವಾಗಿದ್ದು, ತ್ರಿವೇಣಿ ಸಂಗಮಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಅವರು ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಅವರು, ಲಖನೌನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿರುವ ವಾರ್‌ರೂಮ್‌ನಲ್ಲಿ ಮಾಘ ಹುಣ್ಣಿಮೆ ಸ್ನಾನವನ್ನು ವೀಕ್ಷಣೆ ಮಾಡುತ್ತಿದ್ದು, ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಜನತೆಗೆ ಮಾಘ ಹುಣ್ಣಿಮೆ ದಿನದ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಮಹಾಕುಂಭಮೇಳದಲ್ಲಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಬಂದಿರುವ ಎಲ್ಲಾ ಸಂತರು, ಧಾರ್ಮಿಕ ಮುಖಂಡರು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಶುಭಾಶಯಗಳು. ಹರಿಯ ಕೃಪೆಯಿಂದ ಎಲ್ಲರ ಜೀವನವು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದಿಂದ ತುಂಬಿರಲಿ. ಮಾತೆ ಗಂಗಾ, ಯಮುನಾ ಹಾಗೂ ಸರಸ್ವತಿ ಎಲ್ಲರ ಆಶಯಗಳನ್ನು ಈಡೇರಿಸಲಿ ಎಂದು ಹೇಳಿದ್ದಾರೆ.

ಇನ್ನು ಮಹಾಕುಂಭಮೇಳದಲ್ಲಿ ಒಟ್ಟು 6 ಪುಣ್ಯಸ್ನಾನಗಳ ಪೈಕಿ ಮಾಘ ಹುಣ್ಣಿಮೆಯಂದು ನಡೆಯುವ ಪುಣ್ಯಸ್ನಾನ 5ನೇಯದ್ದಾಗಿದೆ. 6ನೇ ಪುಣ್ಯಸ್ನಾನ ಫೆಬ್ರವರಿ.26ರ ಮಹಾಶಿವರಾತ್ರಿಯಂದು ನಡೆಯಲಿದೆ.

Tags:
error: Content is protected !!