Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ʻಇಂಡಿಯಾʼ ಬಿಜೆಪಿಯ ಎಲ್ಲಾ ಯತ್ನ ವಿಫಲಗೊಳಿಸಲಿದೆ: ರಾಹುಲ್‌

ಭಾಗಲ್‌ಪುರ್‌(ಬಿಹಾರ): ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನವನ್ನು ರದ್ದುಗೊಳಿಸಿ ಬಹುಸಂಖ್ಯಾತ ಭಾರತವನ್ನು ವಿಫಲಗೊಳಿಸಲು ಯತ್ನಿಸುತ್ತಿದೆ. ಆದರೆ ಪ್ರಜಾಪ್ರಭುತ್ವದ ಹಿತರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ʻಇಂಡಿಯಾʼ ಮೈತ್ರಿಕೂಟ ಬಿಜೆಪಿಯ ಎಲ್ಲಾ ಯತ್ನವನ್ನು ವಿಫಲಗೊಳಿಸಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಬಿಹಾರದ ಭಾಗಲ್‌ಪುರದಲ್ಲಿ ಶನಿವಾರ ( ಏಪ್ರಿಲ್‌ 20 ) ನಡೆದ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ-ಆರ್‌ಎಸ್‌ಎಸ್‌ ಸಂವಿಧಾನವನ್ನು ರದ್ದುಗೊಳಿಸಲು ಸಂಚು ರೂಪಿಸಿದೆ. ಭಾರತದ ಬಡವರು, ದಲಿತರು, ಬುಡಕಟ್ಟು ಸಮುದಾಯದವರಿಗೆ ದೊರಕಿರುವ ಸೌಲಭ್ಯಗಳೆಲ್ಲಾ ಸಂವಿಧಾನದಿಂದ ಬಂದದ್ದು, ಒಂದು ವೇಳೆ ಸಂವಿಧಾನವನ್ನು ಬದಲಾಯಿಸಿದರೆ ನಿಮ್ಮ ಸೌಲಭ್ಯಗಳೆಲ್ಲಾ ಕೊನೆಗೊಳ್ಳಲಿದೆ ಎಂದು ರಾಹುಲ್‌ ಗಾಂಧಿ ಆತಂಕ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ದೇಶದ ಕೆಲವೇ ಕೆಲ ಶ್ರೀಮಂತರ ಪರವಾಗಿ ಇದೆ. ಇಡೀ ದೇಶದ ಸಂಪತ್ತು ಕೇವಲ 22 ಜನರಲ್ಲಿ ಇದೆ. ಇದನ್ನು ಬದಲಾಯಿಸಲು ನಾವು ಬಯಸುತ್ತೇವೆ ಎಂದರು. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಆದರೆ ವಾಸ್ತವವಾಗಿ 150 ಸ್ಥಾನಗಳನ್ನು ಅದು ಗೆಲ್ಲುವುದಿಲ್ಲ ಎಂದು ಹೇಳಿದರು.

Tags: