Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಲೋಕಸಭೆ ಚುನಾವಣೆ: ಡೂಡಲ್‌ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಿದ ಗೂಗಲ್‌

ಮೈಸೂರು: ಇಂದು ( ಏಪ್ರಿಲ್‌ 19 ) ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ವಿಶ್ವದ ಬೃಹತ್‌ ಸರ್ಚ್‌ ಎಂಜಿನ್‌ ಗೂಗಲ್‌ ವಿಶೇಷ ಡೂಡಲ್‌ ರಚಿಸುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿದೆ.

ಗೂಗಲ್‌ ಮುಖಪುಟದಲ್ಲಿ ʼಗೂಗಲ್‌ʼ ನಡುವೆ ಕೈನ ತೋರುಬೆರಳಿಗೆ ಶಾಹಿ ಹಚ್ಚಿರುವ ಚಿತ್ರವನ್ನು ಬಳಸಿ ಡೂಡಲ್‌ ರಚಿಸಿದೆ. ಇನ್ನು ಗೂಗಲ್‌ ವಿಶೇಷ ದಿನಗಳಂದು ಇಂತಹ ವಿಶೇಷ ಡೂಡಲ್‌ ರಚಿಸುವ ಮೂಲಕ ಸಂಭ್ರಮಾಚರಣೆಯನ್ನು ಮಾಡುವುದು ಸಾಮಾನ್ಯ.

ಇನ್ನು ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಒಟ್ಟು 102 ಕ್ಷೇತ್ರಗಳ ಪೈಕಿ 101 ಕ್ಷೇತ್ರಗಳಲ್ಲಿ ಎನ್‌ಡಿಎ ಸ್ಪರ್ಧಿಸಿದ್ದು, ಐಎನ್‌ಡಿಐಎ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

Tags: