Mysore
24
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತು: ರಾಹುಲ್‌ ಗಾಂಧಿ ವಿರುದ್ಧ ಆಕ್ರೋಶ

ನವದೆಹಲಿ: ಬಡವರ ಮನೆಯಲ್ಲಿ ಫೋಟೋಶೂಟ್‌ ಮಾಡಿಸಿ ಕೆಲವರು ಮನರಂಜನೆ ತೆಗೆದುಕೊಳ್ಳುತ್ತಾರೆ. ಅವರಿಗೆ ಬಡವರ ಮಾತು ಬೋರ್‌ ಆಗಲಿದೆ. ನಾನು ಅವರ ಸಿಟ್ಟನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್‌ ನೀಡಿದ್ದಾರೆ.

ಈ ಬಗ್ಗೆ ಲೋಕಸಭೆಯಲ್ಲಿಂದು ಮಾತನಾಡಿದ ಅವರು, ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಯಸುತ್ತೇವೆ. ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ಇದ್ದರು. ಅವರನ್ನು ಮಿಸ್ಟರ್‌ ಕ್ಲೀನ್‌ ಎಂದು ಕರೆಯಲಾಗುತ್ತಿತ್ತು. ಒಂದು ರೂಪಾಯಿ ಬಿಡುಗಡೆ ಮಾಡಿದರೆ ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಎಲ್ಲಾ ಕಡೆ ಅವರದ್ದೇ ಸರ್ಕಾರ ಇದ್ದರೂ ಈ ಹೇಳಿಕೆ ನೀಡಿದ್ದರು. ಬಾಕಿ ಹಣ ಎಲ್ಲಿ ಹೋಗುತ್ತಿತ್ತು ಆ ಬಗ್ಗೆ ಜನರಿಗೆ ಗೊತ್ತಿದೆ. ಉಳಿತಾಯ ಮತ್ತು ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಬಡವರಿಗೆ ಸುಳ್ಳಿನ ಘೋಷಣೆ ಅಲ್ಲ. ಸತ್ಯವಾದ ಅಭಿವೃದ್ಧಿ ನೀಡಿದ್ದೇವೆ. ಮಧ್ಯಮ ವರ್ಗದ ಕನಸು ಈಡೇರಿಸಿದ್ದೇವೆ. ಬಡವರಿಗೆ ಈವರೆಗೂ ನಾಲ್ಕು ಕೋಟೆ ಮನೆ ಸಿಕ್ಕಿದೆ. ಮಹಿಳೆಯರಿಗೆ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಪ್ರತಿ ಮನೆಗೆ ಕುಡಿಯುವ ನೀರು ನೀಡುವುದು ನಮ್ಮ ಉದ್ದೇಶ. ಜಲ ಜೀವನ್‌ ಮಿಷನ್‌ ಅಡಿ 12 ಕುಟುಂಬಗಳಿಗೆ ಕುಡಿಯುವ ನೀರು ನೀಡಿದ್ದೇವೆ ಎಂದು ಸರ್ಕಾರದ ಸಾಧನೆಯನ್ನು ತಿಳಿಸಿದರು.

Tags:
error: Content is protected !!