Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ 2024: ನಟ ಅಕ್ಷಯ್‌ ಕುಮಾರ್‌ ಸೇರಿದಂತೆ ಬಾಲಿವುಡ್‌ ಸೆಲಿಬ್ರಿಟಿಗಳಿಂದ ಮತದಾನ

ಮುಂಬೈ: 8 ರಾಜ್ಯಗಳ 49 ಕ್ಷೇತ್ರಗಳಿಗೆ ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಇಂದು(ಮೇ.20) ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಮತ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದರಂತೆ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕೀಯ ಮುಖಂಡರು ಸಹ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಫರ್ಹಾನ್‌ ಅಖ್ತಾರ್‌, ಜೋಯಾ ಅಖ್ತರ್‌, ರಾಜ್‌ಕುಮಾರ್‌ ರಾವ್‌, ಜಾಹ್ನವಿ ಕಪೂರ್‌, ಪರೇಶ್‌ ರಾವಲ್‌, ನ್ಯಾ ಮಲ್ಹೋತ್ರಾ ಸೇರಿದಂತೆ ಬಾಲಿವುಡ್‌ ಸೆಲಿಬ್ರಿಟಿಗಳು ಹಾಗೂ ಹಲವು ಗಣ್ಯರು ಮತ ಚಲಾಯಿಸಿದ್ದಾರೆ.

ಮೊದಲ ಬಾರಿಗೆ ಮತ ಚಲಾಯಿಸಿದ ನಟ ಅಕ್ಷಯ್‌ ಕುಮಾರ್‌
ಭಾರತೀಯ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ನಟ ಅಕ್ಷಯ್‌ ಕುಮಾರ್ ಮತ ಚಲಾಯಿಸಿದ್ದಾರೆ. ಮುಂಬೈನ ಮತಗಟ್ಟೆವೊಂದರಲ್ಲಿ ಭಾರತೀಯ ಪ್ರಜೆಯಾಗಿ ಮತ ಚಲಾಯಿಸಿದ್ದಾರೆ. ಅಕ್ಷಯ್‌ ಕುಮಾರ್‌ ಅವರು 2023 ರಲ್ಲಿ ಭಾರತೀಯ ಪೌರತ್ವ ಪಡೆದಿದ್ದರು. ಇದಕ್ಕೂ ಮುನ್ನ ಅವರು ಕೆನಡಾದ ಪೌರತ್ವ ಪಡೆದಿದ್ದರು.

ಮತದಾನ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ನಟ ಅಕ್ಷಯ್‌ ಕುಮಾರ್‌, ನನ್ನ ಭಾರತವು ಅಭಿವೃದ್ದಿ ಹೊಂದಬೇಕು ಜೊತೆಗೆ ಬಲಿಷ್ಠವಾಗಿರಬೇಕು. ಇದೆಲ್ಲವನ್ನು ನಾನು ಮನದಲ್ಲಿಟ್ಟಿಕೊಂಡು ಮತ ಹಾಕಿದ್ದೇನೆ. ಭಾರತೀಯ ಜನರಿಗೆ ತಮಗೆ ಸರಿ ಎನಿಸುವ ನಾಯಕನಿಗೆ ಮತ ಹಾಕುವಂತೆ ಮನವಿ ಮಾಡುತ್ತೇನೆ ಎಂದರು.

ಕಣದಲ್ಲಿರುವ ಪ್ರಮುಖರು
ರಾಯ್‌ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅಮೇಥಿ ಕ್ಷೇತ್ರದಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಲಕ್ನೋದಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೈಸರ್‌ಗಂಜ್‌ನಿಂದ ಬ್ರಿಜ್‌ ಭೂಷಣ್ ಸಿಂಗ್‌ ಅವರ ಮಗ ಕರಣ್ ಭೂಷಣ್‌ ಸಿಂಗ್‌, ಮುಂಬೈ ಉತ್ತರ ಕ್ಷೇತ್ರದಿಂದ ಸಚಿವ ಪಿಯೂಷ್‌ ಗೋಯಲ್‌ ಹಾಗೂ ಬಾರಾಮುಲ್ಲಾದಿಂದ ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ ಕಣದಲ್ಲಿರುವ ಪ್ರಮುಖರು.

ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ.

Tags:
error: Content is protected !!