ಹೊಸದಿಲ್ಲಿ: ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ನೇಮಿಸಿ ಬ್ರಿಟನ್ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಅಲೆಕ್ಸ್ ಎಲ್ಲಿಸ್ ಈ ಹುದ್ದೆಯಲ್ಲಿದ್ದರು.
ʼಲಿಂಡಿ ಕ್ಯಾಮೆರಾನ್ ಅವರನ್ನು ಭಾರತಕ್ಕೆ ನೂತನ ಬ್ರಿಟಿಷ್ ಹೈ ಕಮಿಷನರ್ ಆಗಿ ನೇಮಿಸಲಾಗಿದೆ. ಅಲೆಕ್ಸ್ ಎಲ್ಲಿಸ್ ಅವರು ಮತ್ತೊಂದು ರಾಜತಾಂತ್ರಿಕ ಸೇವೆಗೆ ವರ್ಗಾವಣೆಯಾಗಲಿದ್ದಾರೆʼ ಎಂದು ಬ್ರಿಟಿಷ್ ರಿಟೌಡ್ ತಿಳಿಸಿದೆ.
2020ರಿಂದ ಯುಕೆ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಡಿ ಕ್ಯಾಮೆರಾನ್ ಅವರು ಯುಕೆಯ ಉತ್ತರ ಐರ್ಲೆಂಡ್ ಕಚೇರಿ ಮಹಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇನ್ನು ಲಿಂಡಿ ಕ್ಯಾಮೆರಾನ್ ಇದೇ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬ್ರಿಟನ್ ಹೈಕಮಿಷನ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.





