ಪ್ರಯಾಗ್ ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲು ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ.
ಇದರ ಜೊತೆಗೆ ನಂದಿನಿ ಹಾಲಿನ ಬಳಕೆ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಈ ಟೀ ಪಾಯಿಂಟ್‌ನಿಂದ ಸುಮಾರು ಒಂದು ಕೋಟಿ ಟೀ ಮಾರಾಟ ಮಾಡುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ.
ಈ ಮೂಲಕ ಈ ಒಂದು ಮೇಳದಲ್ಲಿ ಅತೀ ಹೆಚ್ಚು ಟೀ ಮಾರಾಟ ಮಾಡಿದ ಸಂಸ್ಥೆಯೆಂದು ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಜನವರಿ.13ರಿಂದ ಪ್ರಾರಂಭವಾಗಿರುವ ಮಹಾಕುಂಭಮೇಳ 44 ದಿನಗಳ ಕಾಲ ನಡೆಯಲಿದ್ದು, ಈ ಮೇಳದಲ್ಲಿ ನಂದಿನಿ ಹಾಲಿನ ಮೂಲಕ ಖ್ಯಾತಿ ಪಡೆದಿರುವ ಕೆಎಂಎಫ್ ತನ್ನ ಕೈಚಳಕ ತೋರಿಸಲಿದೆ.
ಮಹಾಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಾಗಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದೆ.
ಈ ಮಹಾಕುಂಭಮೇಳವು ಫೆಬ್ರವರಿ.26ರ ಶಿವರಾತ್ರಿವರೆಗೂ ನಡೆಯಲಿದ್ದು, ಕೋಟ್ಯಾಂತರ ಮಂದಿ ಪುಣ್ಯಸ್ನಾನ ಮಾಡಲಿದ್ದಾರೆ.





