Mysore
21
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಇದೇ ಮೊದಲ ಬಾರಿಗೆ ಹೊರಜಗತ್ತಿಗೆ ಕಾಣಿಸಿಕೊಂಡ ಕಿಮ್ ಜೊಂಗ್ ಪುತ್ರಿ

ಸಿಯೋಲ್-ಉತ್ತರ ಕೊರಿಯಾದ ಸರ್ವಾಕಾರಿ ಕಿಮ್ ಜೊಂಗ್ ಉನ್ ಅವರು ಜಗತ್ತಿಗೆ ಇದೆ ಮೊದಲ ಬಾರಿಗೆ ತನ್ನ ಪುತ್ರಿಯ ದರ್ಶನ ಮಾಡಿಸಿದ್ದಾರೆ.
ಖಂಡಾಂತರ ಕ್ಷಿಪಣಿ ಉಡಾವಣಾ ಸ್ಥಳಕ್ಕೆ ಕಿಮ್ ಅವರು ತನ್ನ ಪುತ್ರಿಯೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ದೃಶ್ಯಾವಳಿಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.
ತನ್ನ ಪುತ್ರಿಯನ್ನು ಇದುವರೆಗೂ ಜಗತ್ತಿಗೆ ಪರಿಚಯಿಸದ ಕಿಮ್ ಅವರು ಈಗ ತಮ್ಮ ಮಗಳ ಜೊತೆ ಕಾಣಿಸಿಕೊಂಡಿರುವುದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.


ಕಿಮ್ ಪುತ್ರಿ ಬಿಳಿ ಪಫಿ ಕೋಟ್‍ನಲ್ಲಿ ತಮ್ಮ ತಂದೆಯೊಂದಿಗೆ ಕೈ ಹಿಡಿದುಕೊಂಡು ಬೃಹತ್ ಕ್ಷಿಪಣಿಯನ್ನು ನೋಡುತ್ತಿರುವ ಫೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಿಮ್‍ಗೆ ಮೂವರು ಮಕ್ಕಳು, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ ಎಂದು ಜನ ನಂಬಿದ್ದಾರೆ. ಆದರೆ, ಇದುವರೆಗೂ ಕಿಮ್ ಮಕ್ಕಳು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
2013 ರಲ್ಲಿ ನಿವೃತ್ತ ಅಮೇರಿಕನ್ ಬಾಸ್ಕೆಟ್‍ಬಾಲ್ ತಾರೆ ಡೆನ್ನಿಸ್ ರಾಡ್‍ಮನ್ ಅವರು ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಿಮ್‍ಗೆ ಜು ಏ ಎಂಬ ಮಗು ಮಗಳು ಇದ್ದಾರೆ ಅವರ ಕುಟುಂಬದೊಂದಿಗೆ ನಾನು ಸಮಯ ಕಳೆದಿದ್ದೆ ಎಂದಿದ್ದರು.
ಜು ಎಗೆ ಸುಮಾರು 12-13 ವರ್ಷ ವಯಸ್ಸಾಗಿರುತ್ತದೆ ಎಂದು ಅಂದಾಜಿಸಲಾಗಿದೆ, ಅಂದರೆ ಸುಮಾರು ನಾಲ್ಕರಿಂದ ಐದು ವರ್ಷಗಳಲ್ಲಿ ಅವರು ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ಅಥವಾ ಮಿಲಿಟರಿ ಸೇವೆಗೆ ಸೇರಲು ಇಲ್ಲವೆ ಕಿಮ್ ಉತ್ತರಾಕಾರಿಯಾಗಲು ಆಕೆ ತಯಾರಿ ನಡೆಸುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಿಮ್ ಮಗಳು ಮಾತ್ರವಲ್ಲದೆ ಆತನ ಪತ್ನಿ ರಿ ಸೋಲ್ ಜು ಕೂಡ ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!