Mysore
18
few clouds

Social Media

ಸೋಮವಾರ, 26 ಜನವರಿ 2026
Light
Dark

ಲಂಡನ್|‌ ವಿದೇಶಾಂಗ ಸಚಿವ ಜೈಶಂಕರ್‌ ಮೇಲೆ ಖಲಿಸ್ತಾನಿ ಉಗ್ರರಿಂದ ದಾಳಿಗೆ ಯತ್ನ

ಲಂಡನ್: ಲಂಡನ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್‌ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.

ಜಾಥಮ್‌ ಹೌಸ್‌ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಜೈ ಶಂಕರ್‌ ಅವರು ಕಾರಿನಿಂದ ಇಳಿಯುತ್ತಿದ್ದ ವೇಳೆ ಹಲ್ಲೆಗೆ ಯತ್ನಿಸಿದ್ದಾರೆ.

ಇದಲ್ಲದೇ ವ್ಯಕ್ತಿಯೊಬ್ಬ ಜೈಶಂಕರ್‌ ಅವರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿದ್ದಾನೆ.

ಬಳಿಕ ಜೈಶಂಕರ್‌ ಚರ್ಚೆಯಲ್ಲಿ ಭಾಗವಹಿಸಿದ್ದ ಸ್ಥಳದ ಹೊರಗೆ ಹಲವಾರು ಖಲಿಸ್ತಾನಿ ಪರ ಬೆಂಬಲಿಗರು ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾನಿರತ ಖಲಿಸ್ತಾನಿಗಳನ್ನು ಪೊಲೀಸರು ವಶಕ್ಕೆ ಪಡೆದರು.

Tags:
error: Content is protected !!