Mysore
23
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮೆದುಳನ್ನು ತಿನ್ನುವ ಸೂಕ್ಷ್ಮಾಣು ಜೀವಿಗೆ ಕೇರಳದ ಬಾಲಕ ಬಲಿ

ಕೇರಳ: ಮೆದುಳು ತಿನ್ನುವ ವಿಚಿತ್ರ ಸೂಕ್ಷ್ಮಾಣು ಜೀವಿಗೆ ಕೇರಳದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ.

ಮಲಪ್ಪುರಂನ ಮೂಲದ ಬಾಲಕ ತೀವ್ರ ಅಸ್ವಸ್ಥತೆಯಿಂದ ನರಳುತ್ತಿದ್ದ ಕೇರಳದ ಕೋಳಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು,ಚಿಕಿತ್ಸೆ ಫಲಕಾರಿಯಾಗದೇ ಮರಣಹೊಂದಿದ್ದಾನೆ.

ಇದೊಂದು ನೀರಿನಿಂದ ಹರಡುವ ಸೋಂಕಾಗಿದ್ದು, ಈ ಸೋಂಕಿಗೆ ಒಳಗಾದವರು ಕೇವಲ ಐದು ದಿನಗಳ ಒಳಗಾಗಿ ಕೊನೆಯುಸಿರೆಳೆಯುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮಲಪ್ಪುರಂ ಕೆರೆಯೊಂದರಲ್ಲಿ ಸ್ಥಳೀಯ ಬಾಲಕ ಈಜಾಡಿದ್ದಾನೆ. ಈ ವೇಳೆ ವೈರಸ್‌ ಬಾಲಕನ ದೇಹ ಪ್ರವೇಶಿಸಿದೆ. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೇ ತಿಂಗಳಿನಿಂದಾಚೆಗೆ ಈ ರೀತಿಯ ಸಾವು ನೋವುಗಳು ಪದೇ ಪದೇ ಸಂಭವಿಸುತ್ತಿದ್ದವು. ಕಳೆದ ಒಂದು ತಿಂಗಳಿನಲ್ಲಿಯೇ ಈ ರೀತಿಯಾಗಿ ಸಂಭವಿಸಿದ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ನೀರಿನ ಮೂಲಕ ಮನುಷ್ಯನ ದೇಹ ಒಕ್ಕುವ ಈ ವೈರಾಣು ಮೂಗಿನ ಮೂಲಕ ನೇರವಾಗಿ ಮೆದುಳನ್ನು ಪ್ರವೇಶಿಸುತ್ತದೆ. ಮೆದುಳಿನ ಜೀವಕೋಶದ ಮೇಲೆ ನೇರವಾಗಿ ದಾಳಿ ಮಾಡುವ ಈ ವೈರಾಣು ಕ್ರಮೇಣ ಇದರಿಂದಾಗಿ ಅಮೀಬಾಯಿಕ್‌ ಮೆನಿನ್‌ ಜೋ ಎನ್‌ ಕೆಫಾಲಿಟೀಸ್‌ ಎಂಬ ಕಾಯಿಲೆಗೆ ತುತ್ತಾಗಿ ರೋಗಿ ಸಾವನ್ನಪ್ಪುತ್ತಾನೆ.

 

ಈ ಬಗ್ಗೆ ಜಾಗೃತಿ ವಹಿಸಲು ಕೆರೆ, ನದಿ ಹಾಗೂ ಕೊಳಗಳಲ್ಲಿ ಈಜಾಡುವುದರಿಂದ ದೂರ ಉಳಿದರೆ ಈ ಸಮಸ್ಯೆ ಬಾರದಂತೆ ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Tags:
error: Content is protected !!