ತಮಿಳುನಾಡು: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ.12ರಂದು ವಿಚಾರಣೆಗೆ ಹಾಜರಾಗುವಂತೆ ನಟ ಹಾಗೂ ರಾಜಕಾರಣಿ ವಿಜಯ್‌ಗೆ ಕೇಂದ್ರ ತನಿಖಾ ದಳ ಸಮನ್ಸ್ ಜಾರಿ ಮಾಡಿದೆ.
ಕರೂರು ಜಿಲ್ಲೆಯ ವೇಲುಸ್ವಾಮಿಪುರಂನಲ್ಲಿ ನಡೆದ ಟಿವಿಕೆ ರಾಜಕೀಯ ರ್ಯಾಲಿಯಲ್ಲಿ ಸೆಪ್ಟೆಂಬರ್.27, 2025ರಂದು ಕಾಲ್ತುಳಿತ ಸಂಭವಿಸಿತು.
ಆಗ ಭಾರೀ ಜನಸಂದಣಿ ಮಾರಕಾವಾಯಿತು. ವಿಜಯ್ ಅವರ ಭಾಷಣಕ್ಕಾಗಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಈ ಘಟನೆಯಲ್ಲಿ 41 ಜನರು ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದಲ್ಲಿ ಮೃತಪಟ್ಟವರಿಗೆ ನಟ ವಿಜಯ್ ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಗಾಯಗೊಂಡವರಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.





