Mysore
23
haze

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಲಕ್ಕುಂಡಿ ದೇಗುಲ ಸ್ತಬ್ಭಚಿತ್ರ

ಹೊಸದಿಲ್ಲಿ: ದೆಹಲಿಯಲ್ಲಿ ನಡೆದ 76 ನೇ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಹಿರಿಮೆ ಸಾರುವ ಲಕ್ಕುಂಡಿಯ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

ಕರ್ತವ್ಯಪಥದಲ್ಲಿ ಸಾಗಿದ ಸ್ತಂಭಚಿತ್ರ ಕರ್ನಾಟಕ ಹಿರಿಮೆ, ಶಾಂತಿ ಸಹಬಾಳ್ವೆಯನ್ನು ಸಾರಿತು.

ಸ್ತಂಭ ಚಿತ್ರವು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು, ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಸ್ತಂಭದ ಮುಂಭಾಗ ದೇಗುಲದ ಬ್ರಹ್ಮ ದೇವಾಲಯ, ತೆರದ ಮಂಟಪ, ಅಲಂಕೃತವಾದ ಕಾಶಿ ದೇವಾಲಯ ಪ್ರದರ್ಶಿಸಲಾಗಿದೆ.

ಮೈಸೂರು, ಗದಗ, ಬೆಂಗಳೂರು ಮತ್ತು ಧಾರವಾಡದ ಕಲಾವಿದರು ತಂಡವನ್ನು ಮುನ್ನಡಸಿದ್ದಾರೆ. ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿದ್ದಾರೆ.

Tags:
error: Content is protected !!