ನವದೆಹಲಿ: ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್‌ಗೆ ಡ್ರಗ್ಸ್ ಅಥವಾ ಮಧ್ಯ ಸೇವಿಸಿ ಬರುತ್ತಾರೆ ಎಂದು ಹಿಮಾಚಲ ಪ್ರದೇಶದ ಮಂಡಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಸದ್ಯ ಈ ಹೇಳಿಕೆಯೂ ಭಾರೀ ವಿವಾದ ಸೃಷ್ಠಿಸಿದೆ. ರಾಗಾ ಅವರು ಮಾದಕ ವಸ್ತು ಸೇವಿಸಿ ಸಂಸತ್‌ಗೆ ಬರುತ್ತಾರೆ ಅವರನ್ನು ತಪಾಸಣೆಗೆ ಒಳಪಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೇಶದಲ್ಲಿ ಚಕ್ರವ್ಯೂಹ ರೀತಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಿರ್ಗತಿಕರು, ಬಡವರು, ಯುವಕರ ವಿರುದ್ಧ ಪದ್ಮವ್ಯೂಹ ರಚಿಸಿ ಭಯದ ವಾತಾವರಣ ರೂಪಿಸುತ್ತಿದ್ದಾರೆ ಇದನ್ನು ನಾವು ಜಾತಿ ಗಣತಿ ನಡೆಸುವ ಮೂಲಕ ಇದನ್ನು ಭೇದಿಸುತ್ತೇವೆ ಎಂದು ಹೇಳಿದ್ದರು.
https://x.com/peepoye_/status/1818535272189247591
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂಗನಾ ಅವರು, ಪ್ರಧಾನಿ ಅವರನ್ನು ಸಂವಿಧಾನದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ರಾಹುಲ್ ಗಾಂಧಿ ಅವರು ಪ್ರಧಾನಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದ್ದಾರೆ. ಹೀಗಿದ್ದರೇ ರಾಗಾ ಅವರು ಪ್ರಜಾಪ್ರಭೂತ್ವವನ್ನು ಗೌರವಿಸಿದಂತೆಯಾ? ಸಂವಿಧಾನವನ್ನು ಗೌರವಿಸಿದಂತೆಯಾ? ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ಪ್ರಧಾನಿ ಅವರನ್ನು ತಮ್ಮ ಬಣ್ಣದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ರಾಗಾ ದೂರುತ್ತಾರೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಸಂಸತ್‌ನ ನೀತಿ ನಿಯಮಗಳ ಅರಿವಿಲ್ಲ ಎಂದು ನನಗನಿಸುತ್ತದೆ. ಸಂಸತ್‌ನಲ್ಲಿ ವ್ಯಕ್ತಿಯೊಬ್ಬರು ಈಶ್ವರ, ಚಕ್ರವ್ಯೂಹದ ಬಗ್ಗೆ ಮಾತನಾಡುತ್ತಾರೆ ಎಂದಾದರೇ ಅವರನ್ನು ಮಾಧಕ ವ್ಯಸನ ಪರೀಕ್ಷೆಗೆ ಒಳಪಡಿಸಬೇಕು ಎಂದು ಅನಿಸುವುದಿಲ್ಲವೇ? ಅಂತವರು ಮಾದಕ ವಸ್ತು ಅಥವಾ ಮದ್ಯ ಸೇವಿಸಿ ಮತ್ತಿನಲ್ಲೇ ಸಂಸತ್‌ಗೆ ಬರುತ್ತಾರೆ. ಇದು ಉತ್ತಮ ನಡೆ ಎಂದು ತೋರುವುದಿಲ್ಲ ಎಂದು ಹೇಳಿದ್ದಾರೆ.





