ನವದೆಹಲಿ: ನಟ ಮತ್ತು ಮಕ್ಕಳ್ ನಿಧಿ ಮಯ್ಯಮ್ (ಎಂಎನ್‍ಎಂ) ಮುಖ್ಯಸ್ಥ ಕಮಲ್ ಹಾಸನ್ ಅವರಿಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿಗೆ ಪಾದಾರ್ಪಣೆ ಮಾಡಿದರು.
ಕಮಲ ಹಾಸನ್ ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗ, ಸಂಸದರು ಮೇಜು ಬಡಿಯುವ ಮೂಲಕ ಜೋರಾಗಿ ಕರತಾಡನ ಮಾಡಿದರು. ಕಮಲ್ ಹಾಸನ್ ಅವರು ರಾಜ್ಯಸಭೆಗೆ ಪ್ರವೇಶಿಸಿರುವುದು ಅವರ ರಾಜಕೀಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಏಕೆಂದರೆ ಅವರು ಮೊದಲ ಬಾರಿಗೆ ರಾಷ್ಟ್ರೀಯ ಶಾಸಕಾಂಗದ ಪಾತ್ರವನ್ನು ವಹಿಸಿಕೊಂಡಿದ್ದಾರೆ.
ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಅವರ ನಾಮನಿರ್ದೇಶನವು ಆಗಿದೆ. ಇದು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಕ್ಕಳ್ ನಿಧಿ ಮೈಯಂ ಬೆಂಬಲಕ್ಕೆ ಬದಲಾಗಿ ಅವರಿಗೆ ರಾಜ್ಯಸಭೆಯ ಸ್ಥಾನವನ್ನು ಉಡುಗೊರೆಯಾಗಿ ನೀಡಲಾಗಿತ್ತು.
69 ವರ್ಷದ ನಟ, ರಾಜಕಾರಣಿ, ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, ನನಗೆ ತುಂಬಾ ಹೆಮ್ಮೆ ಮತ್ತು ಗೌರವವಿದೆ ಎಂದು ಹೇಳಿದರು.





