Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕಾಂಗ್ರೆಸ್‌ನ ಕರಾಳ ಘಟ್ಟ: ಸಂವಿಧಾನ ಹತ್ಯಾ ದಿನದ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ

ನವದೆಹಲಿ: ಜೂನ್.‌25ಅನ್ನು ಸಂವಿಧಾನ ಹತ್ಯಾ ದಿವಸ ಎಂದು ನಾಮಕರಣ ಮಾಡುವುದು ತುರ್ತು ಪರಿಸ್ಥಿತಿಯ ಮಿತಿಮೀರಿದ ಕಾರಣದಿಂದ ನೊಂದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜೂನ್.‌25ರಂದು ಸಂವಿಧಾನದ ಹತ್ಯಾ ದಿವಸ ಎಂದು ಆಚರಿಸುವುದು ಸಂವಿಧಾನವನ್ನು ತುಳಿದು ಹಾಕಿದಾಗ ಏನೆಲ್ಲಾ ಸಂಭವಿಸಿತು ಎಂಬುದನ್ನು ನೆನೆಪಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯ ಘೋಷಣೆಯ ಕರಾಳ ದಿನದ ಸ್ಮರಣಾರ್ಥ ಇಂದು ಪ್ರತಿ ವರ್ಷ ಜೂನ್.‌25ರಂದು ಸಂವಿಧಾನ ಹತ್ಯಾದಿನ ಎಂದು ಆಚರಿಸುವುದಾಗಿ ಘೋಷಿಸಿದೆ.

ಈ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ತುರ್ತು ಪರಸ್ಥಿತಿಯ ಮಿತಿಮೀರಿದ ಕಾರಣದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ. ಭಾರತೀಯ ಇತಿಹಾಸದ ಕರಾಳ ಘಟ್ಟವನ್ನು ಕಾಂಗ್ರೆಸ್‌ ಜಾರಿಗೆ ತಂದಿತು. 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಜೂನ್.‌25ರಂದು ಅಮಾನವೀಯ ನೋವುಗಳನ್ನು ಸಹಿಸಿಕೊಂಡವರ ಬೃಹತ್‌ ಕೊಡುಗೆಗಳನ್ನು ಸ್ಮರಿಸಲು ಸಂವಿಧಾನ ಹತ್ಯಾ ದಿವಸ ಎಂದು ಆಚರಿಸಲಾಗುವುದು ಎಂದು ತಿಳಿಸಿದರು.

 

 

Tags: