ಕೆನಡಾ: WWE ದಂತಕತೆ, 16 ಬಾರಿಯ ವಿಶ್ವ ಚಾಂಪಿಯನ್ ಜಾನ್‌ಸೀನ ತಮ್ಮ ರಸ್ಲಿಂಗ್(ಕುಸ್ತಿ) ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಈ ಬಗ್ಗೆ WWE ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಜಾನ್‌ಸೀನ ಅವರು ಕುಸ್ತಿಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎನ್ನುವ ಸಂದೇಶವಿದೆ.
WWE ಗೆ ಅಚ್ಚರಿಯ ವಿದಾಯ ಘೋಷಿಸಿರುವ ಜಾನ್‌ಸೀನ, “ಇಂದು ರಾತ್ರಿ ನಾನು WWE ಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
2001 ರಲ್ಲಿ WWE ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಜಾನ್, ತಮ್ಮ ನಟನೆಯ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣುತ್ತಿದ್ದುದರಿಂದ, 2018 ರಲ್ಲಿ ಅರೆಕಾಲಿಕ ಒಪ್ಪಂದ ಮಾಡಿಕೊಂಡಿದ್ದರು.



