Mysore
20
clear sky

Social Media

ಮಂಗಳವಾರ, 07 ಜನವರಿ 2025
Light
Dark

ದೇಶಾದ್ಯಂತ ಜಿಯೊ ನೆಟ್‌ವರ್ಕ್‌ನಲ್ಲಿ ತಾಂತ್ರಿಕ ದೋಷ: ಗ್ರಾಹಕರ ಪರದಾಟ

ಬೆಂಗಳೂರು: ದೇಶದಾದ್ಯಂತ ರಿಲಯನ್ಸ್‌ ಜಿಯೊ ನೆಟ್‌ವರ್ಕ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಗ್ರಾಹಕರು ಪರದಾಟ ನಡೆಸುತ್ತಿದ್ದಾರೆ.

ಮೊಬೈಲ್‌, ಇಂಟರ್‌ನೆಟ್‌, ಜಿಯೊ ಫೈಬರ್‌ ಸೇರಿದಂತೆ ಗ್ರಾಹಕರೆಲ್ಲಾ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಜಿಯೋ ಕಂಪನಿ ವಿರುದ್ಧ ಗ್ರಾಹಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ಗ್ರಾಹಕರ ಅಸಮಾಧಾನದ ನಡುವೆಯೂ ಜಿಯೊ ಕಂಪನಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಜಿಯೋ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ದೇಶದಾದ್ಯಂತ 10,000ಕ್ಕೂ ಹೆಚ್ಚು ಬಳಕೆದಾರರು ನೆಟ್‌ವರ್ಕ್‌ ವ್ಯತ್ಯಯದ ಬಗ್ಗೆ ವರದಿ ಮಾಡಿದ್ದಾರೆ ಎಂದು ವರದಿಯಾಗಿದೆ.

 

Tags: