ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರದ ಜನವಸತಿ ಪ್ರದೇಶಗಳಲ್ಲಿ ಸ್ಫೋಟಗೊಳ್ಳದ ಹಲವು ಶೆಲ್‌ಗಳು ಪತ್ತೆಯಾಗಿವೆ.
ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂಬ ಪಾಕಿಸ್ತಾನ ವಾದ ಸತ್ಯವಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಸೇನಾ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ ಎಂದು ಸುಳ್ಳು ಹೇಳಿರುವ ಪಾಕಿಸ್ತಾನ, ಗ್ರಾಮದ ನಡುವೆ ಶೆಲ್ ಗಳ ದಾಳಿ ನಡೆಸಿದೆ. ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಜನವಸತಿ ಇದೆ ಎಂದು ತಿಳಿಸಿದ್ದಾರೆ.





