Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಜಮ್ಮು-ಕಾಶ್ಮೀರ: ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಚೆನಾಬ್‌ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಉದ್ಘಾಟಿಸಿದರು.

ಚೆನಾಬ್‌ ನದಿಯಿಂದ 359 ಮೀಟರ್‌ ಎತ್ತರದಲ್ಲಿರುವ ಈ ಸೇತುವೆ 1315 ಮೀಟರ್‌ ಉದ್ದದ ಉಕ್ಕಿನ ಕಮಾನು ರಚನೆಯನ್ನು ಹೊಂದಿದೆ. ತೀವ್ರ ಭೂಕಂಪನ ಚಟುವಟಿಕೆ ಮತ್ತು ಹೆಚ್ಚಿನ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಚೆನಾಬ್‌ ಸೇತುವೆಯ ಜೊತೆಗೆ ಭಾರತದ ಮೊದಲ ಕೇಬಲ್‌-ಸ್ಪೇಡ್‌ ರೈಲು ಸೇತುವೆಯಾಗಿರುವ ಅಂಜಿ ಸೇತುವೆಯನ್ನು ಸಹ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದು ಈ ಪ್ರದೇಶದ ಸವಾಲಿನ ಭೂಪ್ರದೇಶವನ್ನು ದಾಟುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಇನ್ನು ವಿಶೇಷವೆಂದರೆ ಈ ಸೇತುವೆಯನ್ನು 28,000 ಮೆಟ್ರಿಕ್‌ ಟನ್‌ಗಳಿಗಿಂತ ಹೆಚ್ಚು ಉಕ್ಕನ್ನು ಬಳಸಿ ನಿರ್ಮಿಸಲಾಗಿದೆ.

Tags:
error: Content is protected !!