Mysore
24
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ: ಸಿಎಂ ಸ್ಟಾಲಿನ್‌

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯು ಭಾರತದ ಪ್ರಜಾಪ್ರಭುತ್ವದ ಆಶಯವನ್ನು ರಕ್ಷಿಸುವ ಮಹತ್ವ ಹೋರಾಟವಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದ್ದಾರೆ.

ಇದು ಭಾರತದ ಪ್ರಜಾಪ್ರಭುತ್ವಕ್ಕೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ಸನ್ನಿವೇಶವು ಎರಡನೇ ಸ್ವಾತಂತ್ರ್ಯದ ಹೋರಾಟವಾಗಿದೆ. ಭಾರತದ ಪ್ರಜಾಪ್ರಭುತ್ವ ಜಾತ್ಯತೀತತೆ ಮತ್ತು ಬಹುತ್ವವನ್ನು ರಕ್ಷಿಸಲು ಈ ಚುನಾವಣೆ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಬಿಜೆಪಿ ವಿರುದ್ಧ ವಿಪಕ್ಷಗಳ ಏಕತೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಸ್ಟಾಲಿನ್‌, ಹಿರಿಯ ನಾಯಕರಾದ ಅರವಿಂದ್‌ ಕೇಜ್ರಿವಾಲ್‌, ಅಖಿಲೇಶ್‌ ಯಾದವ್‌, ಉದ್ಧವ್‌ ಠಾಕ್ರೆ, ಮಮತ ಬ್ಯಾನರ್ಜಿಯವರ ಉಪಸ್ಥಿತಿ ಬಲ ನೀಡಿದೆ ಎಂದರು. ಮೋದಿ ಮತ್ತು ಆರೆಸ್ಸೆಸ್ಸ್‌ಗೆ ಪ್ರಬಲ ಸವಾಲೊಡ್ಡುವಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪಾತ್ರವನ್ನೂ ಸ್ಟಾಲಿನ್‌ ಇಲ್ಲಿ ಶ್ಲಾಷಿಸಿದ್ದಾರೆ.

Tags:
error: Content is protected !!