Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಾಳೆ ಇಸ್ರೋ 100ನೇ ಉಪಗ್ರಹ ಉಡಾವಣೆ:  ಶ್ರೀಹರಿಕೋಟದಿಂದ ನಾವಿಕ್-02 ಉಡ್ಡಯನ

ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಂಸ್ಥೆಯೂ ೧೦೦ನೇ ಉಪಗ್ರಹ ಉಡಾಯಿಸುತ್ತಿದ್ದು, ನಾಳೆ ಬೆಳಿಗ್ಗೆ 6.23ಕ್ಕೆ ನಾವಿಕ್-02(ಎನ್‌ವಿಎಸ್-2) ಉಪಗ್ರಹ ಉಡಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಸ್ರೋ ಸಂಸ್ಥೆಯೂ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಜಿಎಸ್‌ಎಲ್‌ವಿ) ಎಂಕೆ 2 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತಿದೆ. ಈ ಉಡಾವಣೆಯೂ ಇಸ್ರೋದ 100ನೇ ಯೋಜನೆಯಾಗಿದೆ. ನೂತನ ಮೈಲುಗಲ್ಲನ್ನು ಸ್ಥಾಪಿಸಲಿದೆ.

ಈ ಹಿಂದೆ ಇಸ್ರೋ ಸಂಸ್ಥೆಯೂ 2023ರ ಮೇ 29 ರಂದು ಜಿಎಸ್‌ಎಲ್‌ವಿ-ಎಫ್12 ರಾಕೆಟ್ ಉಡಾಯಿಸಿತ್ತು. ಈ ರಾಕೆಟ್‌ಗೆ ಸುಮಾರು ̧2232 ಕೆಜಿ ತೂಕದ ಎನ್‌ವಿಎಸ್ಉ-01 ಪಗ್ರಹವನ್ನು ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಕಕ್ಷೆಗೆ ಅಳವಡಿಕೆ ಮಾಡಿತ್ತು. ಈ ಉಪಗ್ರಹದ ಬಗ್ಗೆ ಇಸ್ರೋ ಸಂಸ್ಥೆಯೂ ವಿವರಿಸುವಾಗ ಇದರಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಲಾಗಿದೆ ಎಂದು ವರದಿ ನೀಡಿತ್ತು.

ಒಟ್ಟಾರೆಯಾಗಿ ಎನ್‌ವಿಎಸ್-02 ಭಾರತದ ನಾವಿಕ್ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದನ್ನು ಇಸ್ರೋ ಸಂಸ್ಥೆಯೂ ಎನ್‌ವಿಎಸ್-೦೧ರ ಯಶಸ್ಸಿನ ಆಧಾರದಲ್ಲಿ ನಿರ್ಮಾಣ ಮಾಡಿದ್ದು, ಅನೇಕ ತಾಂತ್ರಿಕ ಅಭಿವೃದ್ಧಿಗಳನ್ನು ಅಳವಡಿಸಿದೆ. ಹೀಗಾಗಿ ನಾವಿಕ್ ವ್ಯವಸ್ಥೆಯ ಸಾಮರ್ಥ್ಯ ಹಾಗೂ ಪ್ರದರ್ಶನಗಳನ್ನು ಬಹಳಷ್ಟು ಹೆಚ್ಚಿಸಲಿದೆ.

ನಾವಿಕ್-02 (ಎನ್‌ವಿಎಸ್-02) ಉಪಗ್ರಹದ ಬಗ್ಗೆ ಮಾಹಿತಿ
* ಈ ಉಪಗ್ರಹದ ತೂಕ ಎನ್‌ವಿಎಸ್-೦೧ರಷ್ಟು ಹೊಂದಿರಬಹುದು ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
* ಎನ್‌ವಿಎಸ್-02 ಕಕ್ಷೆಯನ್ನು ಸೇರಲು ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್‌ಆರ್‌ಬಿಟ್(ಜಿಟಿಒ)ಗಳನ್ನು ಅಳವಡಿಸುವ ನಿರೀಕ್ಷೆಗಳಿವೆ.
* ಈ ಉಪಗ್ರಹದ ಯೋಜನಾ ಅವಧಿಯ 12 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯಾಚರಿಸುವ ನಿರೀಕ್ಷೆ ಇದೆ.

ನಾವಿಕ್-02 ವಿಶೇಷತೆ ಏನು?
* ನಾವಿಕ್-02 ಉಪಗ್ರಹವು ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಂದರೆ ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್‌ಅನ್ನು ಹೊಂದಿದೆ. ಅಲ್ಲದೇ ತನ್ನ ಸಂಕೇತಗಳನ್ನು ಎಲ್1 ಬ್ಯಾಂಡಿನಲ್ಲಿ ರವಾನಿಸುತ್ತದೆ.
* ಈ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಗಳೊಡನೆ ನಾವಿಕ್‌ನ ಹೊಂದಾಣಿಕೆಯನ್ನು ಕೂಡ ಅಧಿಕಗೊಳಿಸುತ್ತದೆ.
* ಎನ್‌ವಿಎಸ್-02 ಭಾರತದ ಯೋಜನೆಯ ಜಿಎಸ್‌ಎಲ್‌ವಿ-ಎಫ್ 15ನೇ ಹಾರಾಟವಾಗಲಿದೆ.
* ಭಾರತೀಯ ನಿರ್ಮಾಣದ ಕ್ರಯೋಜನಿಕ್ ಇಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ ಹಾರಾಟವಾಗಲಿದೆ.
* ಎನ್‌ವಿಎಸ್-02 ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್ 15ನೇ ಮೂಲಕ ಹಾರಾಟ ಮಾಡುವುದರಿಂದ ನಿಖರವಾಗಿ ಮಿಲಿಟರಿ ಕಾರ್ಯಾಚರಣೆಗಳು ಹಾಗೂ ಕಾರ್ಯತಂತ್ರದ ಉದ್ದೇಶಗಳಿಗೆ ಪ್ರಯೋಜನವಾಗಲಿದೆ.
* ಎನ್‌ವಿಎಸ್-02ನಲ್ಲಿ ರುಬಿಡಿಯಂ ಅಟಾಮಿಕ್ ಕ್ಲಾಕ್ ಅತ್ಯಂತ ನಿಖರವಾದ ಒಂದು ಉಪಕರಣವಾಗಿದೆ. ಇದು ರುಬಿಡಿಯಂ-87 ಅಣುಗಳ ಕಂಪನವನ್ನು ಅಳೆಯುವ ಮೂಲಕ ಸಮಯವನ್ನು ಲೆಕ್ಕಾಚಾರ ಮಾಡುತ್ತದೆ.
* ಎನ್‌ವಿಎಸ್-02 ಉಪಗ್ರಹವೂ ಎರಡನೇ ತಲೆಮಾರಿನ ನಾವಿಕ್ ವ್ಯವಸ್ಥೆಗಳನ್ನು ಹೊಂದಿದ್ದು, ಬಲವಾದ ಎನ್‌ಕ್ರಿಪ್ಷನ್ ವ್ಯವಸ್ಥೆಯನ್ನು ಹೊಂದಿದೆ.

Tags:
error: Content is protected !!