ಟೆಹರಾನ್: ಇರಾನ್ ಮೇಲೆ ಜಂಟಿಯಾಗಿ ಇಸ್ರೇಲ್ ಮತ್ತು ಅಮೇರಿಕಾ ದಾಳಿ ನಡೆಸಿದೆ. ದಾಳಿಯ ಪರಿಣಾಮ ಇರಾನ್ ದೇಶದ ಸರ್ವೋಚ್ಚ ನಾಯಕ ಅಲಿ ಖಮನೈ ಬಲಿಯಾಗಿದ್ದಾರೆ.
ಇದುವರೆಗೆ ಇರಾನ್‌ನ ಮಿನಾಬ್ ನಗರದಲ್ಲಿ 53 ಶಾಲಾ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರದ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಖಮೇನಿ ಅವರ ಮರಣದ ನಂತರ, ಇರಾನ್ 40 ದಿನಗಳ ಸಾರ್ವಜನಿಕ ಶೋಕಾಚರಣೆಯನ್ನು ಘೋಷಿಸಿದೆ.
ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪಶ್ಚಿಮ ಏಷ್ಯಾ, ಗಲ್ಫ್ ಪ್ರದೇಶಗಳು ಅತ್ಯಂತ ಅಪಾಯಕಾರಿ ಹಂತದಲ್ಲಿದೆ.
ಇಸ್ರೇಲ್, ಗಲ್ಫ್ ರಾಷ್ಟ್ರಗಳು ಮತ್ತು ಅಮೇರಿಕಾದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ ಎಂಬ ವರದಿಯಾಗಿದೆ. ವಿಶ್ವಸಂಸ್ಥೆಯು ಶಾಂತಿಗಾಗಿ ಮನವಿ ಮಾಡುತ್ತಿದೆ.





