Mysore
34
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಹಾರ್ಮುಜ್‌ ಸಂಚಾರಕ್ಕೆ 2 ಹೊಸ ಮಾರ್ಗ ಪ್ರಕಟಿಸಿದ ಐಆರ್‌ಜಿಸಿ

ಟೆಹ್ರಾನ್‌ : ಅಮೆರಿಕ ಮತ್ತು ಇರಾನ್‌ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗಾಗಿ ಎರಡು ಹೊಸ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ.

ಹಾರ್ಮುಜ್ ಜಲಸಂಧಿಯ ಸಾಮಾನ್ಯ ಹಡಗು ಸಂಚಾರದ ಮಾರ್ಗದಲ್ಲಿ ಸಮುದ್ರದ ಒಳಗೆ ಸಮುದ್ರ ಬಾಂಬ್‌ ಹಾಕಿದ್ದರಿಂದ ಆ ಮಾರ್ಗದಲ್ಲಿ ಚಲಿಸುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಮಾರ್ಗಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.

ಈ ಹೊಸ ಮಾರ್ಗಗಳು ಹಡಗುಗಳನ್ನು ಇರಾನ್‌ನ ಲಾರಕ್ ದ್ವೀಪದ ಸಮೀಪವಿರುವ ನೀರಿನ ಮೂಲಕ ಹಾದುಹೋಗುವಂತೆ ಮಾಡುತ್ತವೆ. ಹಡಗುಗಳು ಒಮಾನ್ ಸಮುದ್ರದಿಂದ ಲಾರಕ್ ದ್ವೀಪದ ಉತ್ತರ ಭಾಗದ ಕಡೆಗೆ ಪ್ರವೇಶಿಸಬೇಕು. ಪರ್ಷಿಯನ್ ಕೊಲ್ಲಿಯಿಂದ ಲಾರಕ್ ದ್ವೀಪದ ದಕ್ಷಿಣ ಭಾಗದ ಮೂಲಕ ಒಮಾನ್ ಸಮುದ್ರದ ಕಡೆಗೆ ನಿರ್ಗಮಿಸಬೇಕು ಎಂದು ಸೂಚಿಸಿದೆ.

ಈ ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಹಡಗುಗಳು ಐಆರ್‌ಜಿಸಿ ನೌಕಾಪಡೆಯೊಂದಿಗೆ ನೇರ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ ಈ ಮಾರ್ಗಗಳನ್ನು ಬಳಸುವ ಹಡಗುಗಳಿಗೆ ಕ್ರಿಪ್ಟೋಕರೆನ್ಸಿ ಅಥವಾ ಚೀನೀ ಯುವಾನ್‌ನಲ್ಲಿ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Tags:
error: Content is protected !!