ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದ ಪರಿಸ್ಥಿತಿಯು ಭಾರತದ ಭಾಸುಮತಿ ಅಕ್ಕಿ ರಫ್ತಿನ ಮೇಲೆ ತೀವ್ರ ಹೊಡೆತ ನೀಡಿದೆ.
ದೆಹಲಿಯ ಗೋದಾಮುಗಳಲ್ಲಿ ಸುಮಾರು ನಾಲ್ಕು ಲಕ್ಷ ಟನ್ ಅಕ್ಕಿ ಸ್ಥಗಿತಗೊಂಡಿದ್ದು, ಕೆಲವು ಸರಕುಗಳು ಸಮುದ್ರದ ನಡುವೆಯೇ ಸಿಲುಕಿಕೊಂಡಿವೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಮುಂದುವರಿಯುತ್ತಿರುವ ಯುದ್ಧದ ವಾತಾವರಣವು ಭಾರತೀಯ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ.
ವಿಶ್ವದಾದ್ಯಂತ ಜನಪ್ರಿಯವಾಗಿರುವ ಸುಗಂಧಿತ ಭಾಸುಮತಿ ಅಕ್ಕಿ ಈಗ ದೆಹಲಿಯ ನಯಾ ಬಜಾರ್ ಗೋದಾಮುಗಳಲ್ಲಿ ರಾಶಿ ರಾಶಿ ಬಿದ್ದಿದೆ. ಪರಿಣಾಮ ರೈತರ ಆದಾಯ ಮತ್ತು ದೇಶದ ಕೃಷಿ ವಾಣಿಜ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.





