Mysore
27
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಇರಾನ್‌ಗೆ ಮತ್ತೊಂದು ಶಾಕ್… ಸೇನಾ ಮುಖ್ಯಸ್ಥ ಶದ್ಮನಿ ಸಾವು

ಕೈರೊ : ಇಸ್ರೇಲ್‌ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇರಾನಿನ ಅತ್ಯಂತ ಹಿರಿಯ ಸೇನಾ ಕಮಾಂಡರ್‌, ರೆವಲ್ಯೂಷನರಿ ಗಾರ್ಡ್‌ನ ಮುಖ್ಯಸ್ಥ ಅಲಿ ಶದ್ಮನಿ ಮೃತಪಟ್ಟಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಈ ಬೆನ್ನಲ್ಲೇ ತಮ್ಮ ಸೇನಾ ಕಮಾಂಡರ್‌ನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನಿನ ಸೈನಿಕರು ಪ್ರತಿಜ್ಞೆ ಮಾಡಿರುವುದಾಗಿ ವರದಿಯಾಗಿದೆ.

ಕಳೆದ 14 ದಿನಗಳ ಸೇನಾ ಸಂರ್ಘಷದಲ್ಲಿ ಇಸ್ರೇಲ್‌ ಇರಾನಿನ ಪರಮಾಣು ಯೋಜನೆಯನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ನಡುವೆ ಉಭಯ ರಾಷ್ಟ್ರಗಳ ಸೇನಾ ಸಂಘರ್ಷದಲ್ಲಿ ಮಧ್ಯೆ ಪ್ರವೇಶಿಸಿದ ಅಮೆರಿಕಾ ಕದನ ವಿರಾಮ ಘೋಷಣೆ ಮಾಡಿತ್ತು.

Tags:
error: Content is protected !!