ಕುವೈತ್ ಅಂತಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ಮಾಡಿದೆ. ಕೊಲ್ಲಿಯಾದ್ಯಂತ ಇರಾನ್ ತನ್ನ ದಾಳಿಯನ್ನು ಹೆಚ್ಚಿಸುತ್ತಿದ್ದು, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಂಧನ ಸಂಗ್ರಹ ಟ್ಯಾಂಕ್‌ಗಳನ್ನು ಡ್ರೋನ್ ದಾಳಿಯಲ್ಲಿ ಗುರಿಯಾಗಿಸಿಕೊಂಡಿದೆ.
ಸೆಂಟ್ರಲ್ ಬೈರುತ್‌ನ ರೌಚೆ ಜಿಲ್ಲೆಯ ಹೋಟೆಲ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 10 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಭಾನುವಾರ ವರದಿ ಮಾಡಿದೆ.
ಇರಾನ್ ಕೊಲ್ಲಿಯಾದ್ಯಂತ ತನ್ನ ದಾಳಿಯನ್ನು ಮುಂದುವರಿಸುತ್ತಿರುವಾಗ ರಾಜ್ಯದ ವಾಯುಪ್ರದೇಶವನ್ನು ಪ್ರವೇಶಿಸಿದ 14 ಡ್ರೋನ್‌ಗಳನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ಭಾನುವಾರ ಘೋಷಿಸಿದೆ.
ದೇಶದ ವಾಯುಪ್ರದೇಶದೊಳಗೆ ಎಂಟು ಡ್ರೋನ್‌ಗಳನ್ನು ತಟಸ್ಥಗೊಳಿಸಲಾಯಿತು. ಆದರೆ ಹೆಚ್ಚುವರಿ ಆರು ಡ್ರೋನ್‌ಗಳನ್ನು ತಡೆಹಿಡಿದು ರಿಯಾದ್‌ನ ಪೂರ್ವಕ್ಕೆ ನಾಶಪಡಿಸಲಾಯಿತು.





