ನವದೆಹಲಿ: ಅಧಿಕ ತಾಪಮಾನ ಹಿನ್ನಲೆ ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಬೆಂಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಭಾಗಶಃ ದೆಹಲಿ ಮುಳುಗುವ ಸ್ಥಿತಿ ಬಂದಿದೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಪಿಕ್ ಅಪ್ ಅಂಡ್ ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಮಲ್ಛಾವಣಿ ಕುಸಿದಿದೆ ಎಂದು ವರದಿಯಾಗಿದೆ.
ಇಂದು (ಜೂನ್.28) ದೆಹಲಿಯಲ್ಲಿ ಸುರಿದ ಭಾರೀ ಮಳೆ ಹಿನ್ನೆಲೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಮಲ್ಛಾವಣಿ ಕುಸಿದಿದೆ. ಇದರಿಂದ ಓರ್ವ ಮರಣ ಹೊಂದಿದರೇ, ಆರು ಜನರಿಗೆ ತೀವ್ರ ಹಾನಿಯಾಗಿದೆ.
ಮೇಲ್ಛಾವಣಿ ಕುಸಿತ ಕಂಡ ಬೆನ್ನಲ್ಲೇ ಟರ್ಮಿನಲ್-1 ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಚೆಕ್-ಇನ್ ಕೌಂಟರ್‌ಗಳನ್ನು ಸುರಕ್ಷತಾ ಹಿತದೃಷ್ಠಿಯಿಂದ ಮುಚ್ಚಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.
ಟರ್ಮಿನಲ್-1 ಮಲ್ಛಾವಣಿ ಕುಸಿತ ಕಡೆ ವಿದೇಶಿ ವಿಮಾನ ಕಾರ್ಯಚರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಇಂಡಿಗೋ ಮತ್ತು ಸ್ಪೇಸ್ ಜೆಟ್ T1 ನಿಂದ ಹೊರಡುವ ವಿಮಾನಗಳನ್ನು ಮದ್ಯಾಹ್ನ 2 ವರೆಗೆ ನಿರ್ಬಂಧಿಸಲಾಗಿದೆ.