Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಇರಾನ್‌-ಇಸ್ರೇಲ್‌ ಸಂಘರ್ಷ: ಇಸ್ರೇಲ್‌ನಲ್ಲಿ ಸಿಲುಕಿದ 18 ಮಂದಿ ಕನ್ನಡಿಗರು

ಟೆಲ್‌ ಅವೀವ್:‌ ಅಧ್ಯಯನ ಪ್ರವಾಸಕ್ಕೆಂದು ತೆರಳಿದ್ದ 18 ಮಂದಿ ಕನ್ನಡಿಗರು ಇಸ್ರೇಲ್‌ನಲ್ಲಿ ಸಿಲುಕಿದ್ದು, ತುರ್ತಾಗಿ ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಂದು ವಾರದಿಂದ ಇಸ್ರೇಲ್‌ನಲ್ಲಿದ್ದ ಕನ್ನಡಿಗರು, ಶುಕ್ರವಾರವೇ ಬೆಂಗಳೂರಿಗೆ ವಾಪಸ್‌ ಆಗಬೇಕಿತ್ತು. ಆದರೆ ಇಸ್ರೇಲ್-ಇರಾನ್‌ ಸಂಘರ್ಷದ ಪರಿಣಾಮ ವಿಮಾನ ಹಾರಾಟ ಸ್ಥಗಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಬಿ ಪ್ಯಾಕ್‌ ಎನ್‌ಜಿಒ ತಂಡ ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ನಲ್ಲಿ ಉಳಿದುಕೊಂಡಿದೆ. ತುರ್ತಾಗಿ ನಮಗೆ ಸಹಾಯ ಮಾಡುವಂತೆ ಕೋರಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಭಾರತೀಯ ತಂಡ ಮನವಿ ಮಾಡಿದೆ.

ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಹಿತಿ ನೀಡಲಾಗಿದ್ದು, ನಿಯೋಗದ ಸದಸ್ಯರ ಜೊತೆ ಗೃಹ ಸಚಿವ ಜಿ.ಪರಮೇಶ್ವರ್‌ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!